ಪಾಕಿಸ್ತಾನ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹಾಗೂ ಮಾಜಿ ರಾಷ್ಟ್ರಪತಿ ಆಸಿಫ್ ಅಲಿ ಜರ್ದಾರಿ ಪುತ್ರಿ ಭಖ್ತ್ವಾರ್ ಭುಟ್ಟೋ ಜರ್ದಾರಿ ಇದೇ ತಿಂಗಳ 27ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.
ಅಮೆರಿಕ ಮೂಲದ ಉದ್ಯಮಿ ಮೊಹಮ್ಮದ್ ಚೌಧರಿ ಜೊತೆ ಮಾಜಿ ರಾಷ್ಟ್ರಪತಿ ಪುತ್ರಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಅಂತಾ ಮಾಹಿತಿ ಹೊರಬಿದ್ದಿದೆ. ಆದರೆ ಈ ಬಗ್ಗೆ ಭುಟ್ಟೋ ಕುಟುಂಬದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಮಂತ್ರಣ ಪತ್ರಿಕೆಯ ಅನುಸಾರ ಇದೇ ತಿಂಗಳ 27ರಂದು ಮದುವೆ ಹಾಗೂ ಜನವರಿ 30ರಂದು ವಿವಾಹ ನಡೆಯಲಿದೆ ಎನ್ನಲಾಗ್ತಿದೆ. ಅಲ್ಲದೇ ನಿಶ್ಚಿತಾರ್ಥ ಸಮಾರಂಭ ಬಿಲಾವಾಲ್ ಹೌಸ್ ಕರಾಚಿಯಲ್ಲಿ ನಡೆಯಲಿದೆ ಎನ್ನಲಾಗ್ತಿದೆ.
ಇನ್ನು ನಿಶ್ಚಿತಾರ್ಥಕ್ಕೆ ಆಗಮಿಸಲಿಚ್ಚಿಸುವ ಅತಿಥಿಗಳು ತಮ್ಮ ಕೊರೊನಾ ವೈರಸ್ ನೆಗೆಟಿವ್ ಪ್ರತಿಯನ್ನ ಇ ಮೇಲ್ ಮಾಡುವಂತೆ ಆಮಂತ್ರಣ ಪತ್ರಿಕೆಯಲ್ಲಿ ಸೂಚನೆ ನೀಡಲಾಗಿದೆ. ಹಾಗೂ ಭದ್ರತಾ ದೃಷ್ಟಿಯಿಂದ ಮೊಬೈಲ್ ಬಳಕೆಗೆ ನಿಷೇಧ ಹೇರಲಾಗಿದೆ.
ಮೊಹಮ್ಮದ್ ಚೌಧರಿ ಅಮೆರಿಕ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಯೂನಸ್ ಚೌಧರಿ ಅವರ ಪುತ್ರ. ಪಾಕಿಸ್ತಾನದ ಹಳ್ಳಿಯೊಂದರಿಂದ ಕೆನಡಾಗೆ 1973ರಲ್ಲಿ ವಲಸೆ ಹೋಗಿದ್ದರು.