ಫ್ರಾನ್ಸ್ನ ಕೊನೆಯ ರಾಣಿ ಮೇರಿ ಆಂಟೋನೊಯೇಟ್ಗೆ ಸೇರಿದ ರೇಷ್ಮೆ ಹಾಗೂ ಕುರಿಯ ಚರ್ಮದಿಂದ ತಯಾರಿಸಲಾಗಿದ್ದ ಶ್ವೇತ ವರ್ಣದ ಶೂ 38,53,793.81 ರೂಪಾಯಿಗೆ ಮಾರಾಟವಾಗಿದೆ.
8.8 ಇಂಚು ಉದ್ದದ ಹೀಲ್ಡ್ ಶೂ ಯುರೋಪಿಯನ್ ಅಳತೆ ಪ್ರಕಾರ 36ಕ್ಕೆ ಸಮನಾಗಿದೆ. ನಾಲ್ಕು ರಿಬ್ಬನ್ಗಳಿಂದ ಅಲಂಕೃತಗೊಂಡ ಈ ಶೂನ ರೇಷ್ಮೆ ಬಟ್ಟ ಕೊಂಚ ಮಾಸಿದೆ ಅನ್ನೋದನ್ನ ಬಿಟ್ಟರೆ ಶೂ ಉತ್ತಮ ಸ್ಥಿತಿಯಲ್ಲಿದೆ ಅಂತಾ ಹರಾಜು ಸಂಘಟಕರು ಹೇಳಿದ್ದಾರೆ.
ಒಂದು ಕಾಲದಲ್ಲಿ ಫ್ರಾನ್ಸ್ ರಾಜಮನೆತನದ ನೆಲೆಯಾಗಿದ್ದ ಪ್ಯಾರಿಸ್ನ ಪಶ್ಚಿಮ ಪಟ್ಟಣವಾದ ವರ್ಸೈಲ್ನಲ್ಲಿ ಈ ಮಾರಾಟ ಪ್ರಕ್ರಿಯೆ ನಡೆದಿದೆ.