ದೇಶದಲ್ಲಿ ಪ್ರಾಚೀನ ಪದ್ಧತಿಯನ್ನ ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಬ್ರಿಟಿಷ್ ಮೂಲದ ಪ್ರಜೆ ತುಪ್ಪದ ದೀಪವನ್ನ ಮತ್ತೊಮ್ಮೆ ಮಾರುಕಟ್ಟೆಗೆ ಪರಿಚಯಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಲಂಡನ್ನಿಂದ ಮರಳಿದ ಸಮೀರ್ ಮಹಾಜನ್ ಎಂಬ ಉದ್ಯಮಿ ಪ್ರಸ್ತುತ ಮಹಾರಾಷ್ಟ್ರದ ಥಾನೆಯಲ್ಲಿ ನೆಲೆಸಿದ್ದಾರೆ. ರಾವಣನ ವಧೆ ಮಾಡಿ ಸೀತೆಯನ್ನ ಕರೆದುಕೊಂಡು ರಾಮ ಅಯೋಧ್ಯೆಗೆ ಬಂದಾಗ ತುಪ್ಪದ ದೀಪ ಹಚ್ಚಿ ಸ್ವಾಗತ ಕೋರಲಾಗಿತ್ತಂತೆ.
ಇದೇ ಪರಿಕಲ್ಪನೆಯನ್ನ ಇಟ್ಟುಕೊಂಡಿರೋ ಸಮೀರ್ ತುಪ್ಪದ ದೀಪವನ್ನ ತಯಾರಿಸಿದ್ದಾರೆ.
ತಮ್ಮ ಈ ಉದ್ಯಮಕ್ಕೆ ಸುಲತಾ ಎಂದು ಹೆಸರಿಟ್ಟಿರುವ 41 ವರ್ಷದ ಸಮೀರ್, ತಮ್ಮ ಹಳೆಯ ಪದ್ಧತಿಗಳಿಗೆ ಮತ್ತೆ ಜೀವ ಕೊಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಇಂತಹದ್ದೊಂದು ಪ್ರಯತ್ನ ಮಾಡಿದ್ದೇನೆ. ಅಲ್ಲದೇ ಮೇಕ್ ಇನ್ ಇಂಡಿಯಾಗೂ ಈ ತುಪ್ಪದ ದೀಪಗಳು ಉತ್ತೇಜನ ನೀಡುತ್ತೆ ಅಂತಾ ಹೇಳಿದ್ದಾರೆ. ಗುಲಾಬಿ ಸುಗಂಧದ ವನಸ್ಪತಿ ತುಪ್ಪ ಹಾಗೂ ಮಲ್ಲಿಗೆ ಸುಗಂಧದ ಹಸುವಿನ ತುಪ್ಪದ ಹಣತೆಗಳು ಲಭ್ಯವಿದೆ.