ಪಿಪಿಇ ಕಿಟ್ ಬದಲಾಗಿ ಪ್ಲಾಸ್ಟಿಕ್ ಚೀಲ ವಿತರಿಸಿದ ಯುಕೆ ಸರ್ಕಾರ..! 13-11-2020 3:37PM IST / No Comments / Posted In: Latest News, International ಕೊರೊನಾ ಸಂಕಷ್ಟದ ನಡುವೆಯೂ ರೋಗಿಗಳ ಪ್ರಾಣ ಉಳಿಸುವ ಸಲುವಾಗಿ ವೈದ್ಯ ಲೋಕದ ಸಿಬ್ಬಂದಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಸೇವೆಯನ್ನ ಸಲ್ಲಿಸುತ್ತಿದ್ದಾರೆ. ಹೀಗಾಗಿ ಇಡಿ ವಿಶ್ವವೇ ವೈದ್ಯ ಲೋಕದ ಅವಿರತ ಶ್ರಮಕ್ಕೆ ತಲೆಬಾಗಿದೆ. ಆದರೆ ಯುಕೆಯಲ್ಲಿ ಆರೋಗ್ಯ ಸಿಬ್ಬಂದಿಗೆ ಪಿಪಿಇ ಕಿಟ್ ಬದಲಾಗಿ ಪ್ಲಾಸ್ಟಿಕ್ ಚೀಲಗಳನ್ನ ನೀಡಲಾಗಿದ್ದು ನೆಟ್ಟಿಗರ ಕಣ್ಣು ಕೆಂಪಗಾಗಿಸಿದೆ. ಹಾರೋದಲ್ಲಿರುವ ನಾರ್ತ್ವಿಕ್ ಪಾರ್ಕ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ನರ್ಸ್ಗಳಿಗೆ ಈ ರೀತಿಯ ಕಿಟ್ಗಳನ್ನ ವಿತರಿಸಲಾಗಿತ್ತು. ಈ ಕಿಟ್ಗಳ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನರ್ಸ್ಗಳು ಪ್ಲಾಸ್ಟಿಕ್ ಕಿಟ್ನ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದನ್ನ ನೋಡಿದ ನೆಟ್ಟಿಗರು ಯುಕೆ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. These are repurposed bin bags. They have just been sent to a GP practice as official PPE. Thank you, @drTeaLady for sharing.@MattHancock please can you explain as a matter of urgency why, in the midst of the Covid second wave, NHS staff are being issued with bin bags? pic.twitter.com/P5WfI4vnxB — Dr Rachel Clarke (@doctor_oxford) November 11, 2020