ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತೆ ಈ ವಿಡಿಯೋ 13-11-2020 9:27AM IST / No Comments / Posted In: Latest News, Sports ಬ್ಯಾಲೆನ್ಸಿಂಗ್ ಗೇಮ್ಗಳು ಅಂತಾ ನೀವು ಗೂಗಲ್ನಲ್ಲಿ ಸರ್ಚ್ ಕೊಟ್ಟರೆ ಸಾವಿರಾರು ವಿಡಿಯೋಗಳು ಸಿಗಬಹುದು. ಆದರೆ ಆಟಗಾರ ಆಂಡ್ರಿ ರಾಗೆಟ್ಲಿಯವರ ಈ ವಿಡಿಯೋ ನೋಡಿದ್ರೆ ನೀವು ಮೂಗಿನ ಮೇಲೆ ಬೆರಳಿಡೋದು ಪಕ್ಕಾ. ವ್ಯಾಯಾಮದ ಚೆಂಡು, ಹಲಗೆಯ ಮೇಲೆ ಸೈಕಲ್ ಸವಾರಿ, ಟೈರ್ನಿಂದ ಬ್ಯಾಕ್ಫ್ಲಿಪ್, ಹಗ್ಗದ ಮೇಲಿನ ನಡಿಗೆ ಸೇರಿದಂತೆ ವಿವಿಧ ಸಾಹಸಗಳನ್ನ ಪ್ರದರ್ಶಿಸಿದ್ದಾರೆ ಆಂಡ್ರಿ ರಾಗೆಟ್ಲಿ. ಮುಖಕ್ಕೆ ಮಾಸ್ಕ್ ಹಾಕಿಕೊಂಡೇ ಈ ಆಟವನ್ನ ಆಡಿನ ಆಂಡ್ರಿ ಆಟ ಮುಗಿಯೋವರೆಗೂ ಮಧ್ಯದಲ್ಲಿ ಎಲ್ಲಿಯೂ ವಿಶ್ರಾಂತಿ ಪಡೆಯೋದಿಲ್ಲ. ಈ ವಿಡಿಯೋವನ್ನ ಪೋಸ್ಟ್ ಮಾಡಿರುವ ರಾಗೆಟ್ಲಿ 148 ಪ್ರಯತ್ನಗಳ ಬಳಿಕ ಈ ಸಾಧನೆ ಮಾಡಿದ್ದೇನೆ ಅಂತಾ ಬರೆದುಕೊಂಡಿದ್ದಾರೆ. ಒಲಿಂಪಿಕ್ ಕೂಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನ ಪೋಸ್ಟ್ ಮಾಡಿದೆ. ಈ ವಿಡಿಯೋ ಸಾಮಾನ್ಯ ಜನರನ್ನ ಆಕರ್ಷಿಸೋದು ಹಾಗಿರಲಿ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಕೂಡ ಈ ವಿಡಿಯೋ ಕಂಡು ಹುಬ್ಬೇರಿಸಿದ್ದಾರೆ . The floor is lava! 🤯🔥 🎥: @Andriragettli pic.twitter.com/kLYMOz4rnt — The Olympic Games (@Olympics) November 11, 2020