ಮೂಗಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಚೀನಾದ 31 ವರ್ಷದ ಮಹಿಳೆಯ ಕಿವಿಯ ಸಣ್ಣ ಭಾಗವನ್ನ ವೈದ್ಯರು ಕತ್ತರಿಸಿದ ಅಚ್ಚರಿಯ ಘಟನೆ ಚೀನಾದಲ್ಲಿ ನಡೆದಿದೆ.
31 ವರ್ಷದ ಝಾವೋ ಚೆಂಗ್ಡುನ ಏಂಜಲ್ ವಿಂಗ್ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 1ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ರು. ಆಪರೇಷನ್ ಮುಗಿದ ಬಳಿಕ ಆಕೆಗೆ ಯಾವುದೇ ವ್ಯತ್ಯಾಸ ಗೊತ್ತಾಗಲಿಲ್ಲ. ಆದರೆ ನಾಲ್ಕು ದಿನದ ಬಳಿಕ ಈಕೆಯ ಕಿವಿಯ ಸಣ್ಣ ಭಾಗವನ್ನ ಆಪರೇಷನ್ ಮಾಡಿ ತೆಗೆಯಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.
ತನ್ನ ಕಿವಿಗೆ ಆಪರೇಷನ್ ಆಗಿದೆ ಎಂಬುದರ ಬಗ್ಗೆ ಮಾಹಿತಿಯೇ ಇಲ್ಲದ ಮಹಿಳೆ ಆಸ್ಪತ್ರೆ ಸಿಬ್ಬಂದಿ ಬಳಿ ಸ್ಪಷ್ಟನೆ ಕೇಳಿದ್ದಾರೆ. ಆದರೆ ವೈದ್ಯರು ಮೂಗಿನ ಆಪರೇಷನ್ ವೇಳೆ ಕಿವಿಯ ಸಣ್ಣ ಭಾಗವನ್ನ ಬಳಸಿಕೊಂಡಿದ್ದೇವೆ ಅಂತಾ ಹೇಳಿದ್ದಾರೆ.