ರಾಪರ್ ಕಾರ್ಡಿ ಬಿ, ರಿಬೋಕ್ ಕಂಪನಿಯ ಹೊಸ ಶೂ ಕಲೆಕ್ಷನ್ ಪ್ರಾಯೋಜಕತ್ವಕ್ಕೆ ದುರ್ಗಾ ಮಾತೆಯ ವೇಷ ಧರಿಸುವ ಮೂಲಕ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.
28 ವರ್ಷದ ಈ ರ್ಯಾಪರ್ ಕೆಂಪು ಬಣ್ಣದ ಹೋಬಿಕಾ ಗೌನ್ ಧರಿಸಿ ದುರ್ಗಾ ಮಾತೆ ರೀತಿಯಲ್ಲಿ ಕುಳಿತುಕೊಂಡಿದ್ದಾಳೆ. ಈಕೆಯ ಎರಡು ಕೈಯಲ್ಲಿ ಶೂ ಇದ್ದರೆ. ಇನ್ನುಳಿದ 8 ಕೈಗಳಲ್ಲಿ ಟ್ಯಾಟೂ ಡಿಸೈನ್ ಕಾಣಬಹುದಾಗಿದೆ.
ಫುಟ್ವೇರ್ ಕಂಪನಿ ಈ ಫೋಟೋವನ್ನ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದಂತೆಯೇ ಹಿಂದೂಗಳು ಕೋಪಗೊಂಡಿದ್ದಾರೆ. ಕಮೆಂಟ್ಗಳ ಮೂಲಕ ನೆಟ್ಟಿಗರು ಶೂ ಕಂಪನಿ ಹಾಗೂ ಕಾರ್ಡಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನಮ್ಮಲ್ಲಿ ದೇವಸ್ಥಾನದ ಒಳಗೆ ಚಪ್ಪಲಿ ಧರಿಸಲ್ಲ. ದುರ್ಗಾ ಮಾತೆ ಸೌಂದರ್ಯ ಪ್ರದರ್ಶಿಸುವವಳಲ್ಲ. ನಮ್ಮ ಸಂಸ್ಕೃತಿಯನ್ನ ನಮ್ಮ ದೇವರನ್ನ ಈ ರೀತಿ ಅವಮಾನಿಸೋದನ್ನ ಸಹಿಸಲಾಸಾಧ್ಯ ಎಂದು ಹೇಳಿದ್ದಾರೆ.
ಇನ್ನು ತನ್ನ ಫೋಟೋಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆ ರ್ಯಾಪರ್ ಕ್ಷಮೆ ಯಾಚಿಸಿದ್ದಾಳೆ. ನಾನು ಈ ಫೋಟೋ ಮೂಲಕ ಹಿಂದೂ ದೇವರಿಗೆ ಅಪಮಾನ ಮಾಡಿದೆ ಅಂತಾ ಅನೇಕರು ಹೇಳಿದ್ದಾರೆ. ಆದರೆ ನನಗೆ ಈ ಶೂಟ್ ಮಾಡುವ ವೇಳೆ ರಿಬೂಕ್ ಕಂಪನಿ ನೀವು ದೇವರನ್ನ ಪ್ರತಿನಿಧಿಸುತ್ತಿದ್ದೀರಾ. ದುರ್ಗಾ ಮಾತೆ ಸ್ತ್ರೀ ಶಕ್ತಿ ಎಂದು ಹೇಳಿದ್ದರು. ಹೀಗಾಗಿ ನಾನು ಶೂಟ್ಗೆ ಒಪ್ಪಿದೆ. ಯಾವುದೇ ಧರ್ಮವನ್ನ ಅಥವಾ ದೇವರನ್ನ ಅವಮಾನಿಸುವ ಉದ್ದೇಶ ನನ್ನದಾಗಿರಲಿಲ್ಲ ಎಂದು ತಪ್ಪೊಪ್ಪಿಕೊಂಡಿದ್ದಾರೆ.