ಸಮಂತಾ ರಾಮ್ಸ್ಡೆಲ್ ಎಂಬ 30 ವರ್ಷದ ಮಹಿಳೆ ತನ್ನ ವಿಶಿಷ್ಟ ದೇಹ ರಚನೆ ಮೂಲಕ ಟಿಕ್ಟಾಕ್ನಲ್ಲಿ ಸಖತ್ ಫೇಮಸ್ ಆಗಿದ್ದಾರೆ.
ವಿಶ್ವದ ಅತಿ ದೊಡ್ಡ ಬಾಯಿ ನನ್ನದು ಎಂದು ಹೇಳಿಕೊಳ್ತಿರೋ ಈ ಮಹಿಳೆ 7.5 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾಳೆ.
ಈಕೆ ಬಾಯಿ 3.75 ಇಂಚು ಆಗಿದ್ದು ಗಿನ್ನೆಸ್ ವಿಶ್ವದಾಖಲೆ ಮಾಡಿದವರ ಬಾಯಿಗಿಂತಲೂ ನನ್ನ ಬಾಯಿ ದೊಡ್ಡದು ಅನ್ನೋದು ಸಮಂತಾ ಅಭಿಪ್ರಾಯವಾಗಿದೆ.
ತನ್ನ ಬಾಯಿ ಬಗ್ಗೆಯೇ ಸಾಕಷ್ಟು ವಿಡಿಯೋಗಳನ್ನ ಹಾಕಿರುವ ಈ ಮಹಿಳೆ ಇಡೀ ಸೇಬು, ಸ್ಯಾಂಡ್ವಿಚ್ಗಳನ್ನ ಬಾಯಿಯೊಳಗೆ ಹಾಕಿ ತೋರಿಸುತ್ತಾಳೆ. ಅಲ್ಲದೇ ಟೇಪ್ ಸಹಾಯದಿಂದ ಬಾಯಿಯನ್ನ ಅಳತೆ ಮಾಡಿರುವ ವಿಡಿಯೋವನ್ನೂ ಈಕೆ ಪೋಸ್ಟ್ ಮಾಡಿದ್ದಾಳೆ.
2019ರಲ್ಲೇ ನಾನು ಟಿಕ್ಟಾಕ್ನಲ್ಲಿ ಖಾತೆ ತೆರೆದಿದ್ದೆ. ಆದರೆ ಏಪ್ರಿಲ್ 2020ರವರೆಗೂ ನಾನು ಇದರಲ್ಲಿ ವಿಡಿಯೋಗಳನ್ನ ಪೋಸ್ಟ್ ಮಾಡ್ತಿರಲಿಲ್ಲ. ಆದರೆ ಲಾಕ್ಡೌನ್ನಲ್ಲಿ ನಾನು ಹಾಕಿದ ವಿಡಿಯೋಗಳು ಹೆಚ್ಚಿನ ಲೈಕ್ಸ್ ಪಡೆದವು. ಅದಾದ ಬಳಿಕ ಮಿಲಿಯನ್ಗಟ್ಟಲೇ ಜನರು ನನ್ನನ್ನ ಫಾಲೋ ಮಾಡೋಕೆ ಶುರು ಮಾಡಿದ್ರು ಅಂತಾ ಸಮಂತಾ ಹೇಳಿದ್ದಾರೆ.
https://youtu.be/-9d6FG1I3-M