alex Certify ಛತ್ತೀಸ್‌ ಘಡದಲ್ಲಿ ಅತ್ಯಪರೂಪದ ಬಿಳಿ ಬಣ್ಣದ ಹಾವು ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಛತ್ತೀಸ್‌ ಘಡದಲ್ಲಿ ಅತ್ಯಪರೂಪದ ಬಿಳಿ ಬಣ್ಣದ ಹಾವು ಪತ್ತೆ

ಛತ್ತೀಸ್‌ಘಡದ ಅಂಬಿಕಾಪುರದಲ್ಲಿ ಕಟ್ಟು ಹಾವಿನ ಜಾತಿಗೆ ಸೇರಿದ ಅಪರೂಪದ ಹಾವೊಂದು ಕಾಣಿಸಿಕೊಂಡಿದೆ. ಈ ಹಾವು ಪೂರ್ತಿ ಬೆಳ್ಳಗಿದ್ದು, ಇದೇ ಮೊದಲ ಬಾರಿಗೆ ಇಂಥದ್ದೊಂದು ಹಾವನ್ನು ಕಂಡ ಸ್ಥಳೀಯರು ಚಕಿತಗೊಂಡಿದ್ದಾರೆ.

ಈ ಅಪರೂಪದ ಹಾವಿನ ಬಗ್ಗೆ ತಮಗೆ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಸತ್ಯಂ ಕುಮಾರ್‌ ದ್ವಿವೇದಿ ಬಾವಿ ಒಳಗೆ ಇಳಿದು ಹಾವನ್ನು ರಕ್ಷಿಸಿದ್ದಾರೆ. ಸಾಮನ್ಯವಾಗಿ ಕಟ್ಟು ಹಾವುಗಳು ಛತ್ತೀಸ್‌ಘಡದಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ.

ಆಲ್ಬಿನಿಸಮ್‌ ಎನ್ನುವ ಸ್ಥಿತಿಯಿಂದ ಈ ಹಾವುಗಳಿಗೆ ಈ ರೀತಿ ಮೈಯೆಲ್ಲಾ ಬಿಳಿಯಾಗುತ್ತದೆ. ಸಾಮಾನ್ಯವಾಗಿ ಕಟ್ಟು ಹಾವುಗಳು ಕಪ್ಪು ಮೈಮೇಲೆ ಹಳದಿ ಬಣ್ಣದ ಪಟ್ಟೆಗಳನ್ನು ಹೊಂದಿರುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...