ಬಳಕೆದಾರರ ಮಾಹಿತಿ ಸೋರಿಕೆ ಆರೋಪದಡಿಯಲ್ಲಿ ಭಾರತದಲ್ಲಿ ಬ್ಯಾನ್ ಆದ ಚೀನಿ ಆಪ್ಗಳಲ್ಲಿ ಪಬ್ ಜಿ ಕೂಡ ಒಂದು. ಟಿಕ್ಟಾಕ್, ವಿ ಚಾಟ್ ಗಳಂತೆಯೇ ಪಬ್ ಜಿ ಹಾಗೂ ಪಬ್ ಜಿ ಲೈಟ್ ಎರಡನ್ನೂ ಭಾರತದಲ್ಲಿ ನಿಷೇಧಿಸಲಾಗಿದೆ. ಆದರೆ ಪಬ್ ಜಿ ಇದೀಗ ಭಾರತಕ್ಕೆ ಕಂ ಬ್ಯಾಕ್ ಮಾಡೋಕೆ ಸಿದ್ಧತೆ ನಡೆಸಿದೆ ಅಂತಾ ಹೇಳಲಾಗ್ತಿದೆ.
ದೀಪಾವಳಿ ಹಬ್ಬದ ವಿಶೇಷವಾಗಿ ಪಬ್ಜಿ ತಂಡ ಭಾರತ ಮಾರುಕಟ್ಟೆಯಲ್ಲಿ ಪಬ್ ಜಿ ರೀ ಲಾಂಚ್ ಘೋಷಣೆ ಮಾಡುವ ಸಾಧ್ಯತೆ ಇದೆ. ವರದಿಗಳ ಪ್ರಕಾರ ಪಬ್ ಜಿ ಆಪ್ನ್ನ ಭಾರತದಲ್ಲಿ ಬ್ಯಾನ್ ಮಾಡಿದ ಬಳಿಕ ಈ ಕಂಪನಿ ತನ್ನ ಪಬ್ ಜಿ ಮೊಬೈಲ್ ಇಂಡಿಯನ್ ಐಪಿ ಹಕ್ಕುಗಳನ್ನ ಬ್ಲೂ ಹೋಲ್ಗೆ ಹಸ್ತಾಂತರಿಸಿದೆ. ಈ ಬ್ಲೂ ಹೋಲ್ ದಕ್ಷಿಣ ಕೊರಿಯಾದ ಕಂಪನಿಯಾಗಿದೆ.
ಹೀಗಾಗಿ ಭಾರತದಲ್ಲಿ ಪಬ್ ಜಿ ರೀ ಲಾಂಚ್ ಆದರೆ ಅದು ಚೀನಿ ಆಪ್ ಆಗಿರೋದಿಲ್ಲ. ಬದಲಾಗಿ ದಕ್ಷಿಣ ಕೊರಿಯಾದ ಗೇಮಿಂಗ್ ಅಪ್ಲಿಕೇಶನ್ ಆಗಿ ಭಾರತಕ್ಕೆ ರೀ ಎಂಟ್ರಿ ಕೊಡೋ ಸಾಧ್ಯತೆ ಇದೆ.