ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ದೀಪಾವಳಿ ಹಬ್ಬದ ಸಂದೇಶದಂತೆ ಕರೊನಾವನ್ನ ಸಂಕಷ್ಟದಿಂದ ದೂರವಾಗೋಣ ಎಂಬ ಕರೆ ನೀಡಿದ್ದಾರೆ.
ಇಂಗ್ಲೆಂಡ್ನಲ್ಲಿ ಕರೊನಾ ಎರಡನೇ ಅಲೆ ವ್ಯಾಪಿಸುತ್ತಿದ್ದಂತೆ ಲಾಕ್ಡೌನ್ 2.0 ಘೋಷಣೆ ಮಾಡಲಾಗಿದೆ. ನಮ್ಮ ಮುಂದೆ ದೊಡ್ಡ ಸವಾಲಿರೋದು ನಿಜ. ಆದರೆ ದೇಶದ ಜನತೆ ಸಂಕಲ್ಪ ಹಾಗೂ ಸಮಯಪ್ರಜ್ಞೆಯಿಂದ ಈ ವೈರಸ್ ವಿರುದ್ಧ ನಾವು ಜಯಿಸುತ್ತೇವೆಂಬ ನಂಬಿಕೆ ಇದೆ. ಬೆಳಕು ಕತ್ತಲೆಯ ವಿರುದ್ಧ ಜಯ ಸಾಧಿಸುತ್ತೆ. ರಾವಣನ ಕಪಿಮುಷ್ಠಿಯಿಂದ ಸೀತಾಳನ್ನ ಬಚಾವ್ ಮಾಡಿದ ರಾಮನಿಗೆ ಲಕ್ಷ ದೀಪದ ಸ್ವಾಗತ ಕೋರಲಾಯ್ತು. ಅದೇ ರೀತಿ ನಾವೂ ನಮ್ಮ ವಿಜಯದ ದಾರಿ ಕಂಡುಕೊಳ್ಳುತ್ತೇವೆ. ಅಂತಾ ಹೇಳಿದ್ದಾರೆ.
ಯುಕೆಯಲ್ಲಿರುವ ಭಾರತೀಯ ಸಮುದಾಯ ಸುರಕ್ಷಿತ ದೀಪಾವಳಿ ಆಚರಣೆಗೆ ಮುಂದಾಗಿದೆ. ಇದನ್ನ ನಾವು ಶ್ಲಾಘಿಸುತ್ತೇವೆ ಅಂತಂದ್ರು.