ದೇಶಾದ್ಯಂತ ಕಾಲೇಜು ಹಾಗೂ ವಿಶ್ವವಿದ್ಯಾಲಯ ತೆರೆಯಲು ಮುಂದಾಗಿರುವ ಯುಜಿಸಿ ಈ ಸಂಬಂಧ ಮಾರ್ಗಸೂಚಿ ಹೊರಡಿಸಿದೆ. ಕೊರೊನಾ ಸಂಬಂಧಿ ಮಾರ್ಗಸೂಚಿ ಅನ್ವಯ 50 ಪ್ರತಿಶತಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಹಾಜರಾಗದಂತೆ ನೋಡಿಕೊಳ್ಳಬೇಕು ಅಂತಾ ವಿವಿಗಳಿಗೆ ಸೂಚನೆ ನೀಡಿದೆ.
ಯುಜಿಸಿ ಮಾರ್ಗಸೂಚಿಗಳ ಪ್ರಕಾರ, ಸುರಕ್ಷತೆ ಮತ್ತು ಆರೋಗ್ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಸೀಮಿತ ಸಂಖ್ಯೆಯ ಹಾಸ್ಟೆಲ್‌ಗಳನ್ನು ಮಾತ್ರ ತೆರೆಯಬಹುದಾಗಿದೆ. ಒಂದಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಹಾಸ್ಟೆಲ್ ಕೋಣೆಯಲ್ಲಿ ಉಳಿಯಲು ಅನುಮತಿಸುವುದಿಲ್ಲ. ಕೋವಿಡ್ -19 ರೋಗ ಲಕ್ಷಣಗಳನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಯಾವುದೇ ಸಂದರ್ಭದಲ್ಲೂ ಹಾಸ್ಟೆಲ್‌ನಲ್ಲಿ ಉಳಿಯಲು ಅನುಮತಿಸುವುದಿಲ್ಲ.
ಯುಜಿಸಿ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್, “ವಿದ್ಯಾರ್ಥಿಗಳು ಬಯಸಿದರೆ, ಅವರು ಮನೆಯಲ್ಲಿಯೇ ಇರುತ್ತಾರೆ ಮತ್ತು ತರಗತಿಗಳಿಗೆ ಹಾಜರಾಗದೆ ಆನ್‌ಲೈನ್‌ನಲ್ಲಿ ಅಧ್ಯಯನ ಮಾಡಬಹುದು. ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನೆ ಹೊರತುಪಡಿಸಿ ಉಳಿದೆಲ್ಲ ಕಾರ್ಯಕ್ರಮಗಳಿಗೆ ಆನ್‌ಲೈನ್ ತರಗತಿಗಳು ಮುಂದುವರಿಯುತ್ತವೆ. ಆನ್‌ಲೈನ್ ಮತ್ತು ದೂರ ಶಿಕ್ಷಣವು ಮೊದಲಿನಂತೆ ಆದ್ಯತೆಯ ವಿಧಾನವಾಗಿ ಮುಂದುವರಿಯುತ್ತದೆ ಎಂದು ಹೇಳಿದ್ರು.