ಕೇರಳದ ಹರಿಪ್ರಸಾದ್ ಸಿಎಂ ಎಂಬ ಕಲಾವಿದ 600 ರೂಬಿಕ್ ಕ್ಯೂಬ್ಗಳನ್ನ ಬಳಸಿ ಗಾಯಕಿ ಮೈಥಿಲಿ ಠಾಕೂರ್ ಅವರ ಚಿತ್ರವನ್ನ ಬಿಡಿಸಿದ್ದಾರೆ. ಈ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ .
ಸರಿಗಮಪ ಚಾಂಪ್ಸ್ನಲ್ಲಿ ಖ್ಯಾತಿ ಗಳಿಸಿದ ಮೈಥಿಲಿ ನನ್ನ ನೆಚ್ಚಿನ ಸಂಗೀತಗಾರರಲ್ಲಿ ಒಬ್ಬರು. ಈಕೆ ಖ್ಯಾತಿಯ ಹಿಂದೆ ಓಡಿದವರಲ್ಲ, ಶುದ್ಧ ಸಂಗೀತವನ್ನ ರಚಿಸುವ ಕಲಾವಿದೆ. ನಮ್ಮ ದೇಶದ ಸಂಸ್ಕೃತಿಯನ್ನ ಪ್ರದರ್ಶಿಸುವವರು. ಈ ಮೂಲಕ ಅನೇಕ ಸಂಗೀತಗಾರರಿಗೆ ಪ್ರೇರಣೆ ನೀಡುತ್ತಿದ್ದಾರೆ ಎಂದು ಹರಿಪ್ರಸಾದ್ ವಿಡಿಯೋದ ಜೊತೆ ಬರೆದುಕೊಂಡಿದ್ದಾರೆ.
ವಿಡಿಯೋ ಶೇರ್ ಮಾಡಿದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ಲೈಕ್ಸ್ ಹಾಗೂ ವೀವ್ಸ್ಗಳನ್ನ ಪಡೆದುಕೊಂಡಿದೆ. ಹರಿಪ್ರಸಾದ್ರ ಟ್ಯಾಲೆಂಟ್ನ್ನ ನೆಟ್ಟಿಗರು ಕೊಂಡಾಡಿದ್ದಾರೆ. ಇತ್ತ ಮೈಥಿಲಿ ಕೂಡ ತಮ್ಮ ಇನ್ಸ್ಟಾ ಅಕೌಂಟ್ನಲ್ಲಿ ವಿಡಿಯೋ ಶೇರ್ ಮಾಡಿ ಕಲಾವಿದನಿಗೆ ಧನ್ಯವಾದ ಅರ್ಪಿಸಿದ್ದಾರೆ.