ರಷ್ಯಾದ ಚಿತ್ರತಂಡವೊಂದು ಶೂಟಿಂಗ್ಗಾಗಿ ಬಾಹ್ಯಾಕಾಶಕ್ಕೆ ತೆರಳುತ್ತಿರೋದಾಗಿ ಹೇಳಿದೆ. ಇದೀಗ ಈ ಸಿನಿಮಾಗೆ ಅಂತರಿಕ್ಷಕ್ಕೆ ತೆರಳಲು ಸಿದ್ಧವಿರುವ ನಾಯಕಿಗಾಗಿ ಹುಡುಕಾಟ ನಡೆದಿದೆ.
ಇನ್ನು ಬಾಹ್ಯಾಕಾಶ ಶೂಟಿಂಗ್ಗೆ ಆಯ್ಕೆಯಾಗಬೇಕು ಅಂದರೆ ಚಿತ್ರತಂಡ ಕೆಲ ಷರತ್ತುಗಳನ್ನ ವಿಧಿಸಿದೆ. ಚಾಲೆಂಜ್ ಎಂಬ ಶೀರ್ಷಿಕೆಯ ಈ ಚಿತ್ರ ಅಕ್ಟೋಬರ್ 2021ರಲ್ಲಿ ಬಾಹ್ಯಾಕಾಶದಲ್ಲಿ ಶೂಟಿಂಗ್ ನಡೆಸಲಿದೆ.
ಇನ್ನು ಈ ಚಿತ್ರಕ್ಕೆ ಆಯ್ಕೆಯಾಗಬಯಸುವ ಅರ್ಜಿದಾರೆ ವೃತ್ತಿಪರ ನಟಿಯಾಗಿರಬೇಕೆಂದೆನೂ ಇಲ್ಲ. ಆದರೆ ಅವರು 25 ರಿಂದ 40 ವಯಸ್ಸಿನವರಾಗಿರಬೇಕು. ಎತ್ತರ 150 ಸೆ.ಮೀನಿಂದ 180 ಸೆ.ಮೀ ಇರಬೇಕು. ಹಾಗೂ 50-70 ಕೆಜಿ ತೂಕ ಹೊಂದಿರಬೇಕು. ಇದೆಲ್ಲದರ ಜೊತೆಗೆ ಬಹುಮುಖ್ಯವಾಗಿ ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿರಬಾರದು ಎಂದು ಷರತ್ತು ವಿಧಿಸಲಾಗಿದೆ .