2020ರ ವರ್ಷ ತುಂಬಾ ಕಷ್ಟವಾಗ್ತಿದೆ ಎಂದು ನಿಮಗೆ ಎನಿಸ್ತಾ ಇದ್ದರೆ ನೀವು ಈ ಸಮುದ್ರ ಆಮೆಯ ಪ್ರಯತ್ನವೊಮ್ಮೆ ನೋಡಲೇಬೇಕು. ತನ್ನ ಎರಡು ರೆಕ್ಕೆ ರೀತಿಯ ಅಂಗವನ್ನ ಕಳೆದುಕೊಂಡ ಬಳಿಕವೂ ಪಣ ಬಿಡದ ಆಮೆ ಸಮುದ್ರದಲ್ಲಿ ಈಜುತ್ತಿದೆ.
ಲೌ ಆಲಿವ್ ರಿಡ್ಲಿ ಆಮೆ ಮೀನುಗಾರಿಕೆ ಬಲೆಯಲ್ಲಿ ಸಿಕ್ಕಿಕ್ಕೊಂಡಿದ್ದರಿಂದ ಇದರ ಎರಡೂ ರೆಕ್ಕೆ ರೀತಿಯ ಅಂಗಗಳಿಗೆ ಬಲವಾಗಿ ಪೆಟ್ಟಾಗಿತ್ತು. ಹೀಗಾಗಿ ಇದರ ಎರಡೂ ಕೈಗಳನ್ನ ಕತ್ತರಿಸೋದು ಅನಿವಾರ್ಯವಾಗಿತ್ತು.
ಈ ಘಟನೆ ಬಳಿಕ ಆಮೆಯನ್ನ ಪುನರ್ವಸತಿ ಕೇಂದ್ರದಲ್ಲಿ ಇಡಲಾಗಿತ್ತು. ಆಮೆಗೆ ಈಜೋಕೆ ಬರಲ್ಲ ಅಂತಾ ವೈದ್ಯರು ಊಹಿಸಿದ್ದರು. ಆದರೆ 5 ವರ್ಷಗಳ ಚಿಕಿತ್ಸೆ ಹಾಗೂ ವಿಶ್ರಾಂತಿ ಬಳಿಕ ಈ ಆಮೆ ತಾನೊಬ್ಬ ಹೋರಾಟಗಾರ ಅನ್ನೋದನ್ನ ಸಾಧಿಸಿ ತೋರಿಸಿದೆ. ಈಜಲು ಕಲಿತಿರೋ ಲೌ ಆಲಿವ್ ಆಮೆ ಸಮುದ್ರಕ್ಕೆ ವಾಪಸ್ಸಾಗಿದೆ.