ಉತ್ತರ ಪ್ರದೇಶದ ಮುಜಾಫರ್ನಗರ ಮೂಲದ ರೌಡಿಗಳ ಗ್ಯಾಂಗ್ ಒಂದು ಗೂಂಡಾಗಿರಿ ನಡೆಸಲು ದರ ನಿಗದಿ ಮಾಡಿ ಪಟ್ಟಿ ಬಿಡುಗಡೆ ಮಾಡಿದ್ದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಪಿಸ್ತೂಲ್ ಹಿಡಿದ ಯುವಕನೊಬ್ಬನ ಫೋಟೋ ಹಾಗೂ ರೌಡಿಸಂ ಸೇವೆಗಳ ದರದ ಚಾರ್ಟ್ನ್ನ ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಬೆದರಿಕೆ ಹಾಕಲು 1000 ರೂಪಾಯಿ, ಯಾರನ್ನಾದರೂ ಹೊಡೆಯಲು 5000 ರೂಪಾಯಿ, ಗಂಭೀರ ಗಾಯ ಮಾಡಲು 10000 ರೂ. ಹಾಗೂ ಕೊಲೆ ಮಾಡಲು 55000 ರೂಪಾಯಿ ಅಂತಾ ಬರೆಯಲಾಗಿದೆ.
ಈ ಪೋಸ್ಟ್ಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡ್ತಾ ಇದ್ದಂತೆ ಅಲರ್ಟ್ ಆದ ಪೊಲೀಸರು ಕಿಡಿಗೇಡಿ ಯುವಕನನ್ನ ಪತ್ತೆ ಹಚ್ಚಿದ್ದಾರೆ. ಈ ರೀತಿ ಫೋಟೋ ಪೋಸ್ಟ್ ಮಾಡಿದ ಯುವಕ ಚರತ್ವಾಲ್ ಠಾಣಾ ಪ್ರದೇಶದ ಚೌಕಡ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.