alex Certify ವೇಸ್ಟ್ ಬ್ರೆಡ್​ನಿಂದ ತಯಾರಾಯ್ತು ಟೇಸ್ಟಿ ಬಿಯರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೇಸ್ಟ್ ಬ್ರೆಡ್​ನಿಂದ ತಯಾರಾಯ್ತು ಟೇಸ್ಟಿ ಬಿಯರ್​..!

ಉದ್ಯಮದಲ್ಲಿ ಯಶಸ್ವಿಯಾಗಬೇಕು ಅಂದರೆ ಕ್ರಿಯಾಶೀಲತೆ ಮುಖ್ಯವಾಗಿ ಬೇಕು. ಅದೃಷ್ಟದ ಜೊತೆಗೆ ನಮ್ಮ ಆಲೋಚನೆಗಳು ಗ್ರಾಹಕರಿಗೆ ಇಷ್ಟವಾದರೆ ಮಾತ್ರ ಉದ್ಯಮ ಯಶಸ್ಸಾಗೋಕೆ ಸಾಧ್ಯ.

ಅದೇ ರೀತಿ ಯುಕೆಯ 23 ವರ್ಷದ ಯುವಕನೊಬ್ಬ ವ್ಯರ್ಥವಾದ ಬ್ರೆಡ್​ನಿಂದ ಬಿಯರ್​ ತಯಾರಿಸುವ ಮೂಲಕ ಉದ್ಯಮದಲ್ಲಿ ಯಶಸನ್ನ ಕಂಡಿದ್ದಾರೆ.

ಸ್ಟೊಯಿಡಿಸ್​ ಎಂಬ ಯುಕೆಯ ಇಂಜಿನಿಯರಿಂಗ್​ ಯುವಕ ಬ್ಯ್ಯೂ ಎಂಬ ಹೊಸ ಬಿಯರ್​​ನನ್ನ ಕಂಡುಹಿಡಿದಿದ್ದಾರೆ. ಸೂಪರ್​ ಮಾರ್ಕೆಟ್​ಗಳಲ್ಲಿ ತಿರಸ್ಕೃತವಾದ ಬ್ರೆಡ್​ ಹಾಗೂ ಇತರೆ ಆಹಾರ ಪದಾರ್ಥಗಳಿಂದ ಇದನ್ನ ತಯಾರು ಮಾಡಲಾಗಿದೆಯಂತೆ.

ಕಾರ್ಬನ್​ ನೆಗೆಟಿವ್​ ಅಂಶ ಹೊಂದಿರುವ ಈ ಬಿಯರ್​​ ಬಾಯಿಗೆ ರುಚಿ ಕೋಡೋದ್ರ ಜೊತೆಗೆ ವ್ಯರ್ಥ ಆಹಾರ ಪದಾರ್ಥಗಳ ಮರು ಬಳಕೆಗೆ ನೆರವಾಗಿದೆ.

ಯುಕೆಯಲ್ಲಿ ಪ್ರತಿ ವರ್ಷ 1.9 ಮಿಲಿಯನ್​ ಟನ್​ ಆಹಾರ ವ್ಯರ್ಥವಾಗ್ತಿದೆ ಅಂತಾ ಡಬ್ಲೂ ಆರ್​ ಪಿ ಮಾಹಿತಿ ನೀಡಿದೆ. ಈ ನಡುವೆ ವ್ಯರ್ಥ ಆಹಾರ ಪದಾರ್ಥಗಳಿಂದಲೇ ತಯಾರಾಗೋ ಇಂತಹ ಪಾನೀಯಗಳು ಆಹಾರ ಪದಾರ್ಥಗಳು ವ್ಯರ್ಥವಾಗುವುದನ್ನ ಕಡಿಮೆ ಮಾಡಲು ಸಹಾಯಕಾರಿಯಾಗುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...