ಫ್ಲೋರಿಡಾದ ಸೆನೆಟರ್ ಮಾಕ್ರೋ ರುಬಿಯೋ ಟ್ರಂಪ್ ಪರ ಪ್ರಚಾರ ಮಾಡುವ ಭರದಲ್ಲಿ ತಪ್ಪಾಗಿ ಜೋ ಬಿಡೆನ್ರ ಪರ ಟ್ವೀಟ್ ಮಾಡುವ ಮೂಲಕ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನ ಬೆಂಬಲಿಸಿ ಟ್ವೀಟ್ ಮಾಡಲು ಹೋದ ಸೆನೆಟರ್ ಡೆಮಾಕ್ರಟಿಕ್ ಪಕ್ಷ ಹೋಲುವಂತ ಜಿಫ್ ಹಾಕಿ ಪೇಚಿಗೆ ಸಿಲುಕಿದ್ದಾರೆ.
ಸೆನೆಟರ್ ಮಾಕ್ರೋ ರುಬಿಯೋ ನೀಲಿ ಅಲೆಗಳ ಜಿಫ್ನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಆದರೆ ಈ ಬಣ್ಣ ಡೆಮಾಕ್ರಟಿಕ್ ಪರ ಪ್ರಚಾರಕ್ಕೆ ಬಳಸುವ ಬಣ್ಣವಾಗಿದೆ. ಇದನ್ನ ನೋಡಿದ ಟ್ವೀಟಿಗರು ರೀ ಟ್ವೀಟ್ಗಳ ಮೂಲಕ ಮಾಕ್ರೋ ರುಬಿಯೋರ ಕಾಲೆಳೆದಿದ್ದಾರೆ.
https://twitter.com/sallykohn/status/1323757986406453248?ref_src=twsrc%5Etfw%7Ctwcamp%5Etweetembed%7Ctwterm%5E1323757986406453248%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fus-senator-accidentally-supported-joe-biden-in-florida-with-blue-wave-gif-and-its-just-awkward-3040016.html