ತನ್ನ ರೆಕ್ಕೆಗಳ ಮೂಲಕ ಜೀವಿಗಳನ್ನ ಮುಟ್ಟೋದ್ರಿಂದ ಆಕ್ಟೋಪಸ್ ಆ ಪ್ರಾಣಿಯ ರುಚಿಯನ್ನ ಗ್ರಹಿಸಬಲ್ಲುದು ಎಂಬ ಹೊಸ ಅಧ್ಯಯನವನ್ನ ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಕಂಡು ಹಿಡಿದಿದ್ದಾರೆ. ಅದರ ಗ್ರಹಣಾಂಗದ ಮೇಲ್ಪದರದಲ್ಲಿರುವ ಜೀವಕೋಶಗಳಲ್ಲಿ ಈ ರೀತಿ ರುಚಿಯನ್ನ ಗ್ರಹಿಸುವ ವಿಶೇಷ ಶಕ್ತಿ ಇದೆ ಅಂತಾ ಸಂಶೋಧನೆ ಹೇಳಿದೆ.
ಈ ಗ್ರಹಣಾಂಗಗಳಲ್ಲಿರುವ ಕೀಮೋಟಾಕ್ವೈಲ್ ಎಂಬ ಗ್ರಾಹಕಗಳು ತನ್ನ ಸಂವೇದನೆಯ ಮೂಲಕ ಆ ಜೀವಿಯನ್ನ ಬೇಟೆ ಮಾಡಬೇಕೆ ಬೇಡ್ವೇ ಅನ್ನೋ ಸಂದೇಶವನ್ನ ನರಮಂಡಲಕ್ಕೆ ಕಳಿಸುತ್ತದೆ. ಈ ಗ್ರಾಹಕಗಳು ಜೀವಿಯನ್ನ ತಿನ್ನಬೇಕೋ ಬೇಡವೋ ಅನ್ನೋ ಸಂದೇಶ ಕೊಡುವುದರ ಜೊತೆಗೆ ಆ ಜೀವಿ ವಿಷಕಾರಿಯೋ ಅಲ್ಲವೋ ಅನ್ನೋದನ್ನೂ ತಿಳಿಸುವ ಶಕ್ತಿಯನ್ನ ಹೊಂದಿವೆಯಂತೆ,
ಅಕ್ಟೋಪಸ್ ದೇಹದಲ್ಲಿ ನಡೆಯುವ ಈ ವಿಶೇಷ ಕಾರ್ಯದ ಬಗ್ಗೆ ನಮ್ಮ ಈ ಸಂಶೋಧನೆ ಮಾಹಿತಿ ನೀಡಿದೆ. ಆದರೆ ಆಕ್ಟೋಪಸ್ ದೇಹ ಈ ಸಂಕೇತಗಳನ್ನ ಹೇಗೆ ಕಂಡು ಹಿಡಿಯುತ್ತೆ ಅನ್ನೋದರ ಬಗ್ಗೆ ಅಧ್ಯಯನ ಮುಂದುವರಿದಿದೆ ಅಂತಾ ಲೇಖಕಿ ವ್ಯಾನ್ ಗೀಸೆನ್ ಹೇಳಿದ್ದಾರೆ.