ಸಿಂಗಾಪುರ ಮೂಲದ ಕಂಪನಿಯೊಂದು ಕೊರೊನಾ ಸೋಂಕು ಪತ್ತೆ ಹಚ್ಚಲು ಹೊಸ ಪರೀಕ್ಷೆಯೊಂದನ್ನ ಸಿದ್ದಪಡಿಸಿದ್ದು ಇದರ ಮೂಲಕ ಕೆಲವೇ ನಿಮಿಷಗಳಲ್ಲಿ ಕೊರೊನಾ ಇದೆಯೋ ಇಲ್ಲವೋ ಎಂಬುದನ್ನ ಹೇಳಬಹುದು ಅಂತಾ ಹೇಳಿದೆ.
ಸಿಂಗಾಪುರದ ಕಂಪನಿ ಕಂಡು ಹಿಡಿದ ಈ ಕೊರೊನಾ ಪರೀಕ್ಷೆಯನ್ನ 180 ಜನರ ಮೇಲೆ ಪ್ರಯೋಗ ಮಾಡಲಾಗಿದ್ದು ಇದರಲ್ಲಿ 90 ಶೇಕಡಾ ಸರಿಯಾದ ಫಲಿತಾಂಶ ಬಂದಿದೆ ಅಂತಾ ಹೇಳಲಾಗಿದೆ.
ಈ ಪರೀಕ್ಷೆ ಅಧಿಕೃತವಾಗಬೇಕು ಅಂದರೆ ಫಲಿತಾಂಶ ಇನ್ನಷ್ಟು ನಿಖರವಾಗಬೇಕಿದ್ದು ಮುಂದಿನ ವರ್ಷದ ಆರಂಭದಲ್ಲಿ ಮಾರುಕಟ್ಟೆಗೆ ಬರಲಿದೆ ಅಂತಾ ಕಂಪನಿ ತಿಳಿಸಿದೆ.