ಲಂಡನ್ ಸೌತ್ವಾರ್ಕ್ ಕ್ಯಾಥೆಡ್ರಲ್ನ ಡೂರ್ಕಿನ್ಸ್ ಬೆಕ್ಕು ನಿಧನವಾದ ಹಿನ್ನೆಲೆ ಕೃತಜ್ಞತಾ ಸೇವೆಯನ್ನ ಆಯೋಜಿಸಲಾಗಿತ್ತು, ದಾರಿ ತಪ್ಪಿ ಚರ್ಚ್ಗೆ ಬಂದು ಸೇರಿದ್ದ ಈ ಬೆಕ್ಕು ದಶಕಕ್ಕೂ ಹೆಚ್ಚು ಕಾಲ ಇಲ್ಲಿ ವಾಸ ಮಾಡಿದೆ. ಈ ಬೆಕ್ಕು ಲಂಡನ್ ರಾಣಿಯನ್ನ ಭೇಟಿಯಾಗಿದ್ದು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲೂ ಭಾರೀ ಹೆಸರು ಮಾಡಿತ್ತು.
2008ರಲ್ಲಿ ಚರ್ಚ್ ಗೆ ಬಂದು ಆಶ್ರಯ ಪಡೆದಿದ್ದ ಡೂರ್ಕಿನ್ಸ್ ಕಳೆದ ತಿಂಗಳು ಮೃತಗೊಂಡಿದೆ. ಡೂರ್ಕಿನ್ಸ್ಗೆ ನಿಧನಕ್ಕೆ ಸಂತಾಪ ಸೂಚಿಸಿ ಚರ್ಚ್ನಲ್ಲಿ ಸಂತಾಪ ಸಮಾರಂಭ ಏರ್ಪಡಿಸಲಾಗಿತ್ತು. ಸಂಪೂರ್ಣ ಕಾರ್ಯಕ್ರಮವನ್ನ ಆನ್ಲೈನ್ನಲ್ಲಿ ನೇರ ಪ್ರಸಾರ ಮಾಡಲಾಗಿದೆ. ಟ್ವಿಟರ್ನಲ್ಲಿ ಖಾತೆ ಹೊಂದಿರುವ ಡೂರ್ಕಿನ್ಸ್ಗೆ ಸಾಕಷ್ಟು ಮಂದಿ ಫಾಲೋವರ್ಸ್ ಇದ್ದರು.
https://twitter.com/DoorkinsM/status/1321531016272584705?ref_src=twsrc%5Etfw%7Ctwcamp%5Etweetembed%7Ctwterm%5E1321531016272584705%7Ctwgr%5Eshare_3&ref_url=https%3A%2F%2Findianexpress.com%2Farticle%2Ftrending%2Ftrending-globally%2Fmemorial-service-doorkins-cat-6910005%2F