ಮಕ್ಕಳು ಹೆಚ್ಚಾಗಿ ತಮ್ಮ ಹಾಸಿಗೆ ಹಾಗೂ ಬೆಡ್ಶೀಟ್ಗಳು ತಮಿಗಿಷ್ಟದಂತೆ ಇರಬೇಕು ಅಂತಾ ಬಯಸುತ್ತವೆ. ತಮ್ಮಿಷ್ಟದ ಕಂಬಳಿ ಹೊದ್ದು ಮಲಗಿದ್ರೆ ಮಕ್ಕಳಿಗೆ ಅದೇನೋ ಒಂದು ರೀತಿ ಸುರಕ್ಷತಾಭಾವ ಬಂದಂತೆ ಎನಿಸಿಬಿಡುತ್ತೆ. ಆದರೆ ಈ ಅಭ್ಯಾಸ ಮಕ್ಕಳಿಗಷ್ಟೇ ಅಲ್ಲ ಪ್ರಾಣಿಗಳಿಗೂ ಇದೆ ಅನ್ನೋದನ್ನ ಪುಟಾಣಿ ಘೇಂಡಾಮೃಗವೊಂದು ತೋರಿಸಿಕೊಟ್ಟಿದೆ.
ಕೀನ್ಯಾ ದೇಶದ ಶೆಲ್ಡ್ರಿಕ್ ವೈಲ್ಡ್ ಲೈಫ್ ಟ್ರಸ್ಟ್ನಲ್ಲಿರುವ ಘೇಂಡಾಮೃಗದ ಮರಿಯೊಂದು ಕಂಬಳಿಯಲ್ಲಿ ಬೆಚ್ಚಗೆ ಮಲಗಿದೆ. ಘೇಂಡಾ ಮೃಗದ 17 ಸೆಕೆಂಡ್ಗಳ ಮುದ್ದಾದ ವಿಡಿಯೋವನ್ನ ಟ್ರಸ್ಟ್ ಟ್ವೀಟರ್ನಲ್ಲಿ ಪೋಸ್ಟ್ ಮಾಡಿದೆ.
ಅಪೋಲೋ ಹೆಸರಿನ ಈ ಘೇಂಡಾ ಮೃಗ ಅನಾಥವಂತೆ. ಒಂದು ವರ್ಷದ ಹಿಂದೆ ಟ್ರಸ್ಟ್ಗೆ ಬಂದು ಸೇರಿದ ಈ ಘೇಂಡಾಮೃಗಕ್ಕೆ ಆ ಕಂಬಳಿ ಅಂದರೆ ಬಲುಪ್ರೀತಿಯಂತೆ. ಹೀಗಾಗಿ ಆ ಕಂಬಳಿಯನ್ನೇ ಟೆಂಟ್ ರೀತಿ ಮಾಡಿಕೊಂಡು ಈ ಅಪೋಲೋ ನಿತ್ಯ ನಿದ್ದೆ ಮಾಡುತ್ತದೆ ಅಂತಾ ಟ್ರಸ್ಟ್ ಮಾಹಿತಿ ನೀಡಿದೆ.