alex Certify ಮೆಕ್​ಡೊನಾಲ್ಡ್​​ನಲ್ಲಿ ನಡೆಯಲಿದೆ ಮದುವೆ ಸಮಾರಂಭ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಕ್​ಡೊನಾಲ್ಡ್​​ನಲ್ಲಿ ನಡೆಯಲಿದೆ ಮದುವೆ ಸಮಾರಂಭ..!

ಕರೊನಾ ವೈರಸ್​ನಿಂದಾಗಿ ಎರಡು ಬಾರಿ ಮದುವೆ ಮುಂದೂಡಿಕೆ ಮಾಡಿಕೊಂಡಿದ್ದ ಸ್ಕಾಟ್ಲೆಂಡ್​ನ ಜೋಡಿಯೊಂದು ಮೆಕ್​ಡೊನಾಲ್ಡ್​ನಲ್ಲಿ ಮದುವೆ ಆಗಲು ನಿರ್ಧಾರ ಮಾಡಿವೆ.

ಕರೊನಾ ವೈರಸ್​ ಸಂಕಷ್ಟದಿಂದಾಗಿ ಕಳೆದ 12 ವಾರಗಳಲ್ಲಿ ಮೆಲಿಸ್ಸಾ ರಸ್ಸೆಲ್​ ಹಾಗೂ ಶಾನಿನ್​ ಮೆಕೆನ್ನಾ ವಿವಾಹ 2 ಬಾರಿ ರದ್ದುಗೊಂಡಿದೆ. ಆದರೆ ಮೆಲಿಸ್ಸಾ ತಂದೆ ಆರೋಗ್ಯ ಹದಗೆಡ್ತಾ ಇರುವ ಹಿನ್ನೆಲೆ ಈ ಜೋಡಿ ಮೆಕ್​ಡೊನಾಲ್ಡ್​ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದೆ.

ವಿವಾಹದ ಬಳಿಕ ಮುಂದಿನ ಕಾರ್ಯಕ್ರಮಗಳು ಚಟೆಲ್​ಹೆರಾಲ್ಟ್ ಕಂಟ್ರಿ ಪಾರ್ಕ್​ನಲ್ಲಿ ನಡೆಯಲಿದೆ. ಆದರೆ ಮದುವೆ ಸಮಾರಂಭವನ್ನ ಮೆಕ್​ಡಿ ನಲ್ಲೇ ನಡೆಸಲಾಗುತ್ತೆ. ಇನ್ನು ಈ ವಿಚಾರವಾಗಿ ಮಾತನಾಡಿದ ಮೆಲಿಸ್ಸಾ, ನಾನು ಕಳೆದ 6 ವರ್ಷಗಳಿಂದ ಮೆಕ್​ಡೊನಾಲ್ಡ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ಅಲ್ಲಿ ನನ್ನ ಅನೇಕ ಸಂಭ್ರಮದ ಕ್ಷಣಗಳನ್ನ ಕಳೆದಿದ್ದೇನೆ. ಇದೀಗ ನನ್ನ ಪ್ರೀತಿಪಾತ್ರರ ಎದುರು ಮದುವೆ ಆಗಲು ಉತ್ಸುಕನಾಗಿದ್ದೇನೆ ಅಂತಾ ಹೇಳಿಕೊಂಡಿದ್ದಾರೆ.

ಮೆಲಿಸ್ಸಾ ಹಾಗೂ ಶಾನನ್​​ ಮದುವೆಗೆ ಅತಿಥಿಯಾಗಿ ಬಂದವರಿಗೆ ಬಿಗ್​ ಮಾಕಾ, ಮೊಝರೆಲ್ಲಾ ಡಿಪ್ಸ್ ಹಾಗೂ ಐಸ್​ಕ್ರೀಂ ನೀಡಲು ನಿರ್ಧರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...