ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಕೋಳಿ ಕಾಳಗವನ್ನ ನಿಲ್ಲಿಸಿದ ಪೊಲೀಸ್ ಅಧಿಕಾರಿಯನ್ನೇ ಕೊಲೆಗೈದ ದಾರುಣ ಘಟನೆ ಫಿಲಿಫೈನ್ಸ್ನಲ್ಲಿದೆ ನಡೆದಿದೆ.
ಕರೊನಾ ವೈರಸ್ ಸೋಂಕು ನಿಯಂತ್ರಣಕ್ಕೋಸ್ಕರ ಜನರು ಒಂದೆಡೆ ಸೇರೋದನ್ನ ನಿಷೇಧಿಸಲಾಗಿದೆ. ಹೀಗಾಗ್ಯೂ ಸಹ ಉತ್ತರ್ ಸಮರ್ ಪ್ರಾಂತ್ಯದ ಮಡುಗಾಂಗ್ ಎಂಬಲ್ಲಿ ಕೋಳಿ ಕಾಳಗ ಏರ್ಪಡಿಸಲಾಗಿತ್ತು. ಈ ಚಟುವಟಿಕೆಯನ್ನ ನಿಲ್ಲಿಸಿದ ಸ್ಯಾನ್ಜೋಸ್ ಪುರಸಭೆ ಠಾಣೆಯ ಉಸ್ತುವಾರಿ ಲೆ. ಕ್ರಿಶ್ಚಿಯನ್ ಬೊಲೊಕ್ ಅವರನ್ನ ಹತ್ಯೆಗೈಯಲಾಗಿದೆ.
ಹಕ್ಕಿಗಳನ್ನ ಮುಟ್ಟುಗೋಲು ಹಾಕಲು ಮುಂದಾಗುತ್ತಿದ್ದಂತೆ 30ರ ಹರೆಯದ ಅಧಿಕಾರಿಗೆ ಬ್ಲೇಡ್ನಿಂದ ಇರಿಯಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಧಿಕಾರಿಯನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಯ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.