alex Certify ಡ್ರಗ್ಸ್ ಪ್ರಕರಣ: ಮಾಜಿ ಗೃಹ ಸಚಿವರ ಪುತ್ರ ಇ.ಡಿ ಕಸ್ಟಡಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರಗ್ಸ್ ಪ್ರಕರಣ: ಮಾಜಿ ಗೃಹ ಸಚಿವರ ಪುತ್ರ ಇ.ಡಿ ಕಸ್ಟಡಿಗೆ

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಮಾಜಿ ಗೃಹ ಸಚಿವ ಕೋಡಿಯೇರಿ ಬಾಲಕೃಷ್ಣನ್ ಪುತ್ರ ಬಿನೇಶ್ ಕೋಡಿಯೇರಿಯನ್ನು ನಾಲ್ಕು ದಿನಗಳ ಕಾಲ ಇ.ಡಿ (ಜಾರಿ ನಿರ್ದೇಶನಾಲಯ) ತನ್ನ ಕಸ್ಟಡಿಗೆ ಪಡೆದುಕೊಂಡಿದೆ.

ಡ್ರಗ್ಸ ಪೆಡ್ಲರ್ ಅನೂಪ್ ಎಂಬಾತನಿಗೆ ಬಿನೇಶ್ ಬೆಂಗಳೂರಿನಲ್ಲಿ ಹೋಟೆಲ್ ತೆರೆಯಲು 50 ಲಕ್ಷ ರೂ ಹಣ ನೀಡಿದ್ದರು. ಅಲ್ಲದೇ ಡ್ರಗ್ಸ್ ಪ್ರಕರಣದ ಆರೋಪಿಗಳ ಜೊತೆ ಬಿನೇಶ್ ನಿರಂತರ ಸಂಪರ್ಕ ಹೊಂದಿದ್ದು ಅಕ್ರಮ ಹಣ ವರ್ಗಾವಣೆ ಆರೋಪ ಕೂಡ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ಇ.ಡಿ ಅಧಿಕಾರಿಗಳು ಬಿನೇಶ್ ವಿಚಾರಣೆ ನಡೆಸಿದ್ದರು.

ಇಂದು ಕೂಡ ಬಿನೇಶ್ ಇ.ಡಿ ವಿಚಾರಣೆಗೆ ಬೆಂಗಳೂರು ಕಚೇರಿಗೆ ಹಾಜರಾಗಿದ್ದರು. ವಿಚಾರಣೆಗೆ ಸೂಕ್ತವಾಗಿ ಸ್ಪಂದಿಸದ ಕಾರಣ ಇ.ಡಿ ಅಧಿಕಾರಿಗಳು ವಿಚಾರಣೆ ಮಧ್ಯೆಯೇ ಬಿನೇಶ್ ರನ್ನು 4 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...