ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಮದುವೆ ಸಂಭ್ರಮದಲ್ಲಿದ್ದಾರೆ. ಕೊರೊನಾ ಭೀತಿಯ ನಡೆವೆಯೂ ನಟಿ ನಿವಾಸದಲ್ಲಿ ಅರಿಶಿಣ ಶಾಸ್ತ್ರ ಹಾಗೂ ಮೆಹಂದಿ ಕಾರ್ಯಕ್ರಮ ನೆರವೇರಿದೆ. ಇದರ ಫೋಟೋಗಳನ್ನ ನಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಉದ್ಯಮಿ ಗೌತಮ್ ಕಿಚ್ಲು ಜೊತೆ ಮುಂಬೈನಲ್ಲಿ ಶುಕ್ರವಾರ ಕಾಜಲ್ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಸದ್ಯ ಕಾಜಲ್ ಹಾಗೂ ಆಕೆಯ ಸಹೋದರಿ ನಿಶಾ ಅರಿಶಿಣ ಹಾಗೂ ಮೆಹಂದಿ ಸಂಭ್ರಮದ ಫೋಟೋಗಳನ್ನ ಶೇರ್ ಮಾಡಿದ್ದು ಅಭಿಮಾನಿಗಳು ಫಿದಾ ಆಗಿದ್ದಾರೆ.
ಕೋವಿಡ್ ಭೀತಿ ಇರುವ ಹಿನ್ನೆಲೆ ಕಾಜಲ್ ಅಗರ್ವಾಲ್ ವಿವಾಹ ಸಂಭ್ರಮಕ್ಕೆ ಸಂಬಂಧಿಕರು ಹಾಗೂ ಅತ್ಯಾಪ್ತರಿಗಷ್ಟೇ ಆಮಂತ್ರಣ ನೀಡಲಾಗಿದೆ.
https://www.instagram.com/p/CG6IGPqHkMh/?utm_source=ig_web_copy_link