ಕೆಲವರು ಎಣ್ಣೆಯುಕ್ತ ಚರ್ಮವನ್ನು ಹೊಂದಿರುವಂತೆ ಇನ್ನು ಕೆಲವರು ಎಣ್ಣೆಯುಕ್ತ ಕೂದಲನ್ನು ಹೊಂದಿರುತ್ತಾರೆ. ಇದರಿಂದ ತಲೆಯಲ್ಲಿ ಧೂಳು ಕುಳಿತುಕೊಂಡು ತಲೆಹೊಟ್ಟು, ತುರಿಕೆ ಸಮಸ್ಯೆ ಕಾಡುತ್ತದೆ.
ಈ ಎಣ್ಣೆಯುಕ್ತ ಕೂದಲನ್ನು ನಿವಾರಿಸಲು ಇಲ್ಲಿದೆ ನೋಡಿ ಒಂದಷ್ಟು ಮನೆಮದ್ದು.
ನಿಂಬೆ ರಸ ಜಿಡ್ಡು ಕೂದಲಿನ ಸಮಸ್ಯೆಗೆ ಪರಿಣಾಮಕಾರಿ ಔಷಧ. ಇದು ತಲೆ ಹೊಟ್ಟನ್ನು ನಿವಾರಿಸುತ್ತದೆ. 1 ಕಪ್ ನೀರಿಗೆ 2 ನಿಂಬೆ ಹಣ್ಣಿನ ರಸ ಸೇರಿಸಿ ನಿಮ್ಮ ಕೂದಲಿಗೆ ಹಚ್ಚಿ 15 ನಿಮಿಷ ಬಿಟ್ಟು ಕೂದಲನ್ನು ತೊಳೆಯಿರಿ.
ಟೊಮೆಟೊ ರಸ ಕೂಡ ನೆತ್ತಿಯ ಪಿಹೆಚ್ ಮಟ್ಟವನ್ನು ಸಮತೋಲಗೊಳಿಸಲು ಸಹಾಯ ಮಾಡುತ್ತದೆ. ಎಣ್ಣೆಯಂಶ ಬಿಡುಗಡೆಯಾಗುವುದನ್ನು ತಡೆಯುತ್ತದೆ. ಆದ ಕಾರಣ ಹಣ್ಣಾದ ಟೊಮೆಟೊ ಹಣ್ಣನ್ನು ನಿಮ್ಮ ಕೂದಲಿಗೆ ಹಚ್ಚಿ 30 ನಿಮಿಷ ಬಿಟ್ಟು ತೊಳೆದರೆ ಎಣ್ಣೆ ಚರ್ಮ ನಿವಾರಣೆಯಾಗುತ್ತದೆ.