ವಿಶ್ವಕಪ್ನಲ್ಲಿ ಹೀರೋ ಎನಿಸಿಕೊಂಡಿದ್ದ ಬೆನ್ಸ್ಟೋಕ್ಸ್ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಅಷ್ಟೊಂದು ಶೈನ್ ಆಗದೇ ಅಭಿಮಾನಿಗಳ ಮುಖದಲ್ಲಿ ನಿರಾಸೆ ಮೂಡಿಸಿದ್ದರು. ಆದರೆ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಟಿ 20 ಪಂದ್ಯದಲ್ಲಿ ಶತಕ ಬಾರಿಸೋ ಮೂಲಕ ತನ್ನ ಖದರ್ನ್ನ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ.
ಮುಂಬೈ ಇಂಡಿಯನ್ಸ್ ನೀಡಿದ್ದ 196 ರನ್ಗಳ ಗುರಿ ಬೆನ್ನಟ್ಟಿದ ಸ್ಟೋಕ್ಸ್ (107*) ಹಾಗೂ ಸಂಜು ಸ್ಯಾಮ್ಸನ್ (54*) 152 ರನ್ಗಳ ಜೊತೆಯಾಟ ಆಡಿದ್ರು. ಈ ಮೂಲಕ ರಾಜಸ್ಥಾನ ರಾಯಲ್ಸ್ ಗೆಲುವಿಗೆ ಪ್ರಮುಖ ಕಾರಣ ಎನಿಸಿಕೊಂಡ್ರು.
ಪಂದ್ಯದ ಆರಂಭದಲ್ಲಿ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ಸಂಕಷ್ಟ ಅನುಭವಿಸಿತು. ಕ್ವಿಂಟನ್ ಡಿಕಾಕ್ ಕೇವಲ 6 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದರು. ಇಶಾನ್ ಕಿಶನ್ ಹಾಗೂ ಸೂರ್ಯ ಕುಮಾರ್ 83 ರನ್ಗಳ ಉತ್ತಮ ಜೊತೆಯಾಟ ನೀಡಿದರಾದರೂ ಆರ್ಚರ್ ಹಿಡಿದ ಅದ್ಭುತ ಕ್ಯಾಚ್ನಿಂದಾಗಿ ಕಿಶನ್ 37 ರನ್ಗೆ ಔಟ್ ಆದ್ರು. ಬೌಂಡರಿ ಲೈನ್ಗೆ ಹೊರಟಿದ್ದ ಬಾಲ್ನ್ನ ಆರ್ಚರ್ ಒಂದೇ ಕೈಯಲ್ಲಿ ಹಿಡಿದ ಪರಿ ಕಂಡು ಆಟಗಾರರೆಲ್ಲ ನಿಬ್ಬೆರಗಾದ್ರು.