ಹಬ್ಬದ ಸಮಯ ಮನೆಯಲ್ಲಿ ಕೆಲಸವೂ ಜಾಸ್ತಿ ಇರುತ್ತದೆ. ಸುಲಭವಾಗಿ ರುಚಿಕರವಾದ ಸಿಹಿ ಖಾದ್ಯಗಳು ಇದ್ದರೆ ಎಲ್ಲರಿಗೂ ಖುಷಿಯಾಗುತ್ತದೆ. ಇಲ್ಲಿ ಸುಲಭವಾಗಿ ಮಾಡಬಹುದಾದ ರವೆ ಪಾಯಸ ಇದೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
ರವೆ – 5 ಟೇಬಲ್ ಸ್ಪೂನ್, 3 ಕಪ್ – ಹಾಲು, 4 – ಏಲಕ್ಕಿ, 2 ಟೇಬಲ್ ಸ್ಪೂನ್ – ಗೋಡಂಬಿ, 1 ಟೇಬಲ್ ಸ್ಪೂನ್ – ದ್ರಾಕ್ಷಿ, 5 ಟೇಬಲ್ ಸ್ಪೂನ್ – ರವೆ, 1 ಟೇಬಲ್ ಸ್ಪೂನ್ – ತುಪ್ಪ.
ಮಾಡುವ ವಿಧಾನ:
ಸ್ಟವ್ ಮೇಲೆ ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಸೇರಿಸಿಕೊಂಡು ದ್ರಾಕ್ಷಿ, ಗೋಡಂಬಿ ಹುರಿದು ಒಂದು ತಟ್ಟೆಗೆ ತೆಗೆದಿಟ್ಟುಕೊಳ್ಳಿ. ನಂತರ ಅದಕ್ಕೆ ರವೆ ಸೇರಿಸಿ ಪರಿಮಳ ಬರುವವರಗೆ ಹುರಿಯಿರಿ. ನಂತರ ಇದಕ್ಕೆ ಹಾಲು ಸೇರಿಸಿ ಕೈಯಾಡಿಸುತ್ತಲೇ ಇರಿ. ತದನಂತರ ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ. ಸಣ್ಣ ಉರಿಯಲ್ಲಿಟ್ಟು ಕುದಿಸಿ. ನಿಮಗೆ ಎಷ್ಟು ದಪ್ಪಗೆ ಬೇಕೋ ಅಷ್ಟು ಕುದಿಸಿಕೊಳ್ಳಿ. ತೀರಾ ದಪ್ಪಗಾದರೆ ಚೆನ್ನಾಗಿರಲ್ಲ.
ನಂತರ ಹುರಿದುಕೊಂಡ ಗೋಡಂಬಿ, ದ್ರಾಕ್ಷಿ ಸೇರಿಸಿ ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿದರೆ ರುಚಿಕರವಾದ ಪಾಯಸ ಸವಿಯಲು ಸಿದ್ಧ.