alex Certify ಬಲು ಸುಲಭ ʼಕ್ಯಾಬೇಜ್ʼ​ ಮಂಚೂರಿಯನ್​ ರೆಸಿಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಲು ಸುಲಭ ʼಕ್ಯಾಬೇಜ್ʼ​ ಮಂಚೂರಿಯನ್​ ರೆಸಿಪಿ

ರಸ್ತೆ ಬದಿಗಳಲ್ಲಿ ಇರುವ ಚಾಟ್ಸ್ ಅಂಗಡಿಗಳಲ್ಲಿ ನಿಂತು ಕ್ಯಾಬೇಜ್​ ಮಂಚೂರಿಯನ್​ ಸವಿಯೋ ಮಜಾನೇ ಬೇರೆ. ಆದರೆ ಕರೊನಾದಿಂದಾಗಿ ಮನೆಯಿಂದ ಹೊರಗೆ ಬರೋಕೂ ನೂರು ಬಾರಿ ಯೋಚನೆ ಮಾಡಬೇಕಾದ ಪರಿಸ್ಥಿತಿ ಬಂದುಬಿಟ್ಟಿದೆ. ಆದರೆ ಈ ಕ್ಯಾಬೇಜ್​ ಮಂಚೂರಿಯನ್​ನ್ನ ನೀವು ಮನೆಯಲ್ಲೇ ಬಹಳ ಆರಾಮಾಗಿ ತಯಾರು ಮಾಡಬಹುದು.

ಬೇಕಾಗುವ ಸಾಮಗ್ರಿ: ಕ್ಯಾಬೇಜ್​ – 1 (ಮಧ್ಯಮ ಗಾತ್ರದ್ದು), ಮೈದಾ ಹಿಟ್ಟು – 1/2 ಕಪ್​​, ಜೋಳದ ಹಿಟ್ಟು – 3/4 ಕಪ್​, ಈರುಳ್ಳಿ – 1(ದೊಡ್ಡದು).ಹಸಿ ಮೆಣಸು – 2, ಕೊತ್ತಂಬರಿಸೊಪ್ಪು, 1 ಕಪ್ ಅಡುಗೆ ಎಣ್ಣೆ – 1, ಕಾಳು ಮೆಣಸು ಪುಡಿ – 1/2 ಚಮಚ, ಸೋಯಾ ಸಾಸ್​ – 1 ಚಮಚ , ವಿನೇಗರ್​ – 1 ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ, ಚಿಟಿಕೆಯಷ್ಟು ರೆಡ್​ ಫುಡ್​ ಕಲರ್​( ಅಗತ್ಯವಿದ್ದರೆ ಮಾತ್ರ), ರುಚಿಗೆ ತಕ್ಕಷ್ಟು ಉಪ್ಪು, ನೀರು

ಮಾಡುವ ವಿಧಾನ: ಕ್ಯಾಬೇಜ್​ನ್ನ ಸಣ್ಣಗೆ ತುರಿದು ಚೆನ್ನಾಗಿ ತೊಳೆದುಕೊಳ್ಳಿ . ಇದಕ್ಕೆ ಮೈದಾ ಹಿಟ್ಟು, ಜೋಳದ ಹಿಟ್ಟು, 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಾಳು ಮೆಣಸು ಪುಡಿ, ಫುಡ್​ ಕಲರ್, ಉಪ್ಪು​ ಹಾಕಿ ಚೆನ್ನಾಗಿ ಕಲಸಿ. ಕ್ಯಾಬೇಜ್​​ ನೀರು ಬಿಡೋದ್ರಿಂದ ಹೆಚ್ಚಿಗೆ ನೀರು ಹಾಕೋ ಅವಶ್ಯಕತೆ ಇರೋದಿಲ್ಲ. ಒಂದು ವೇಳೆ ಕ್ಯಾಬೇಜ್​​ನಲ್ಲಿದ್ದ ನೀರಿನ ಅಂಶ ಸಾಕಾಗಿಲ್ಲ ಅಂದಲ್ಲಿ ಮಾತ್ರ ನೀರನ್ನ ಮಿಶ್ರಣಕ್ಕೆ ಸಿಂಪಡಿಸಿಕೊಂಡು ಕಲಿಸಿಡಿ. ಈ ಮಿಶ್ರಣವನ್ನ ಚಿಕ್ಕ ಬಾಲ್​ಗಳ ಸೈಜ್​​ನಲ್ಲಿ ಉಂಡೆ ಮಾಡಿ ಎಣ್ಣೆಯಲ್ಲಿ ಚೆನ್ನಾಗಿ ಕರಿಯಿರಿ.

ಇನ್ನೊಂದು ಪಾತ್ರೆಗೆ ಸ್ವಲ್ಪ ಅಡಿಗೆ ಎಣ್ಣೆ ಹಾಕಿ. ಇದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ, ಒಂದು ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸಣ್ಣಗೆ ಕತ್ತರಿಸಿದ ಮೆಣಸನ್ನ ಹಾಕಿ ಹುರಿಯಿರಿ. ಇದಕ್ಕೆ 1 ಚಮಚ ಸೋಯಾ ಸಾಸ್​ ಹಾಗೂ ವಿನೇಗರ್​ ಹಾಕಿ( ಇವೆರೆಡನ್ನ ಮೊದಲೇ ಒಂದು ಕಪ್​ನಲ್ಲಿ ಮಿಶ್ರಣ ಮಾಡಿಟ್ಟರೆ ಇನ್ನೂ ಒಳ್ಳೆಯ ಟೇಸ್ಟ್ ಬರಲಿದೆ), 2 ಚಮಚ ಟೊಮ್ಯಾಟೋ ಸಾಸ್​, ಉಪ್ಪು, ಹಾಗೂ ಸ್ವಲ್ಪ ನೀರಿಗೆ 1 ಚಮಚ ಜೋಳದ ಹಿಟ್ಟನ್ನ ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನೂ ಗ್ರೇವಿಗೆ ಹಾಕಿ ಕಲಿಸಿ. ಇದಾದ ಬಳಿಕ ಗ್ರೇವಿಗೆ ಎಣ್ಣೆಯಲ್ಲಿ ಕರಿದ ಕ್ಯಾಬೇಜ್​ ಉಂಡೆಗಳನ್ನ ಹಾಕಿ ಕಲಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನ ಹಾಕಿ ಸರ್ವ್​ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...