alex Certify ಪುಟ್ಟ ಪೋರಿಯ ನೃತ್ಯಕ್ಕೆ ಬೆರಗಾದ ಬಿಗ್ ಬಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಪೋರಿಯ ನೃತ್ಯಕ್ಕೆ ಬೆರಗಾದ ಬಿಗ್ ಬಿ….!

ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್​ ಪುಟ್ಟ ಬಾಲಕಿಯೊಬ್ಬಳ ಹರಿಯಾಣ್ವಿ ನೃತ್ಯಕ್ಕೆ ಫಿದಾ ಆಗಿದ್ದಾರೆ. ತಮ್ಮ ಇನ್ಸ್​​ಟಾಗ್ರಾಂ ಖಾತೆಯಲ್ಲಿ ಬಾಲಕಿಯ ನೃತ್ಯದ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಕಪ್ಪು ಬಣ್ಣದ ಸಲ್ವಾರ್​ ಹಾಗೂ ಕೇಸರಿ ಬಣ್ಣದ ದುಪ್ಪಟ್ಟ ಹಾಕಿರೋ ಪುಟ್ಟ ಪೋರಿ ಅಪ್ನೆ ಸಸುರೆ ಕೆ ಆಗೇ ಎಂಬ ಹರಿಯಾಣ್ವಿ ಹಾಡಿಗೆ ಮಸ್ತ್​ ಮಸ್ತ್​ ಸ್ಟೆಪ್ಸ್ ಹಾಕಿದ್ದಾಳೆ.

ಅದ್ಭುತ ನೃತ್ಯದ ಝಲಕ್​ ಜೊತೆಗೆ ಆಕೆಯ ಮುಖಭಾವ ಕೂಡ ನೋಡುಗರ ಕಣ್ಣನ್ನ ಸೆಳೆಯುವಂತಿದೆ. ಡ್ಯಾನ್ಸ್ ಮಾಡ್ತಾ ಮಾಡ್ತಾ ಮಧ್ಯದಲ್ಲೇ ಆಕೆಯ ಜುಟ್ಟಿ ( ಚಪ್ಪಲಿ) ತೆಗೆದುಹೋದ್ರೂ ಸಹ ಕ್ಯಾರೆ ಎನ್ನದ ಹುಡುಗಿ ಅಮೋಘವಾಗಿ ನೃತ್ಯ ಪ್ರದರ್ಶಿಸಿದ್ದಾಳೆ.

ಪೋರಿಯ ವಿಡಿಯೋ ಇನ್ಸ್​​ಟಾದಲ್ಲಿ ಪೋಸ್ಟ್ ಮಾಡಿದ ಬಿಗ್​ ಬಿ, ತರಬೇತಿಯನ್ನೇ ಪಡೆಯದ ಈ ಪ್ರತಿಭೆಯ ನೃತ್ಯ ಬೆರಗುಗೊಳಿಸುವಂತಿದೆ. ನೃತ್ಯ ಮಾಡ್ತಾ ಮಾಡ್ತಾ ನಿನ್ನ ಜುಟ್ಟಿ ತೆಗೆದುಹೋಯ್ತು. ಆದರೆ ಪ್ರದರ್ಶನ ಹೀಗೆ ಮುಂದುವರೀತಾನೇ ಇರಲಿ ಅಂತಾ ಹಾರೈಸಿದ್ದಾರೆ.

https://www.instagram.com/tv/CGkw2-aB4mM/?utm_source=ig_web_copy_link

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...