ಕಳೆದ ವರ್ಷ ಯಲಹಂಕದಲ್ಲಿ ಏರೋ ಇಂಡಿಯಾ ಶೋ ವೇಳೆ ಯಲಹಂಕ ಏರ್ಬೇಸ್ ಪಾರ್ಕಿಂಗ್ ಸ್ಥಳದಲ್ಲಿ ಅಗ್ನಿ ಅನಾಹುತ ಸಂಭವಿಸಿರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಬೆಂಕಿ ಅನಾಹುತದಲ್ಲಿ 300ಕ್ಕೂ ಹೆಚ್ಚು ವಾಹನಗಳು ಅಗ್ನಿಗೆ ಆಹುತಿಯಾಗಿದ್ವು. ಇದೀಗ ಮುಂದಿನ ವರ್ಷದ ಏರ್ ಇಂಡಿಯಾ ಶೋಗೆ ಸಿದ್ಧತೆ ನಡೀತಿದೆ.
ಹೀಗಾಗಿ ವಾಹನ ಮಾಲೀಕರು ಹಾಗೂ ಇನ್ಶುರೆನ್ಸ್ ಕಂಪನಿಗಳಿಗೆ ಪಾರ್ಕಿಂಗ್ ನಲ್ಲಿ ಇನ್ನೂ ನಿಂತಿರೋ ಗುಜರಿ ವಾಹನಗಳನ್ನ ತೆರವುಗೊಳಿಸಿ ಅಂತಾ ಯಲಹಂಕ ಪೊಲೀಸರು ನೋಟಿಸ್ ನೀಡಿದ್ದಾರೆ .
ಕಳೆದ ವರ್ಷ ಸಂಭವಿಸಿದ್ದ ಅಗ್ನಿ ದುರಂತದಲ್ಲಿ 300ಕ್ಕೂ ಹೆಚ್ಚು ವಾಹನ ಸುಟ್ಟು ಕರಕಲಾಗಿತ್ತು. ಇದರಲ್ಲಿ ಸುಮಾರು 250 ವಾಹನಗಳನ್ನ ಮಾಲೀಕರು ವಾಪಸ್ ತೆಗೆದುಕೊಂಡು ಹೋಗಿದ್ದಾರೆ. ಆದರೆ ಇನ್ನೂ 75 ವಾಹನಗಳು ಏರ್ಬೇಸ್ ಪಾರ್ಕಿಂಗ್ ಸ್ಥಳದಲ್ಲೇ ನಿಂತಿದೆ.
ಈ ವಾಹನಗಳ ಮಾಲೀಕರು ಹಾಗೂ ಇನ್ಶುರೆನ್ಸ್ ಕಂಪನಿಗಳಿಗೆ ಪೊಲೀಸರು ನೋಟಿಸ್ ನೀಡುವ ಮೂಲಕ ವಾಹನ ತೆರವು ಮಾಡಿ ಅಂತಾ ಸೂಚನೆ ಕೊಟ್ಟಿದ್ದಾರೆ. ಫೆಬ್ರವರಿ 2021ರಂದು ಏರೋ ಇಂಡಿಯಾ ಶೋ ನಡೆಯಲಿದೆ.