10 ರೂಪಾಯಿಗೆ ಬಿರಿಯಾನಿ ಎಂಬ ಆಫರ್ ನೀಡಿ ಬಿರಿಯಾನಿ ಮಾರಾಟ ಮಾಡ್ತಿದ್ದ ವ್ಯಕ್ತಿ ಜೈಲುಪಾಲಾದ ಘಟನೆ ತಮಿಳು ನಾಡಿನ ಅರುಪ್ಪುಕೊಟ್ಟಾಯಿಯಲ್ಲಿ ನಡೆದಿದೆ.
ಹೋಟೆಲ್ಗೆ ಗ್ರಾಹಕರನ್ನ ಸೆಳೆಯೋಕೆ ಪ್ಲಾನ್ ಮಾಡಿದ್ದ ಮಾಲೀಕ ಝಾಹೀರ್ ಹುಸೇನ್ 10 ರೂಪಾಯಿಗೆ ಬಿರಿಯಾನಿ ನೀಡೋದಾಗಿ ಜಾಹೀರಾತು ನೀಡಿದ್ದಾನೆ. ಅಲ್ಲದೇ ಈ ಆಫರ್ ಕೇವಲ ಬೆಳಗ್ಗೆ 11ರಿಂದ 1 ಗಂಟೆಯವರೆಗೆ ಮಾತ್ರ ಅಂತಾ ಬೇರೆ ಹೇಳಿದ್ದಾನೆ, ಇದನ್ನ ನೋಡಿದ ಬಿರಿಯಾನಿ ಪ್ರಿಯರು ಹೋಟೆಲ್ ಮುಂದೆ ಜಮಾಯಿಸಿಬಿಟ್ಟಿದ್ದಾರೆ.
ಕರೊನಾ ಸಮಯದಲ್ಲೂ ಸಾಮಾಜಿಕ ಅಂತರ ಕಾಪಾಡದೇ ಗ್ರಾಹಕರು ನಿಂತಿದ್ದನ್ನ ಕಂಡ ಪೊಲೀಸರು ಹೋಟೆಲ್ ಮಾಲೀಕನ್ನ ಬಂಧಿಸಿದ್ದಾರೆ.
ಗ್ರಾಹಕರಿಗೆ ನೀಡಲಿಕ್ಕೋಸ್ಕರ ಝಾಹೀರ್ ಹುಸೇನ್ 2500 ಬಿರಿಯಾನಿ ಪ್ಯಾಕೇಟ್ ರೆಡಿ ಮಾಡಿದ್ದ. ಆದರೆ ಅರ್ಧದಷ್ಟು ಬಿರಿಯಾನಿ ಖಾಲಿಯಾಗೋದ್ರೊಳಗೆ ಹುಸೇನ್ನನ್ನ ಪೊಲೀಸರು ಬಂಧಿಸಿದ್ದಾರೆ. ಅಂಗಡಿ ಮುಂದೆ ನೆರೆದಿದ್ದ ಜನರಿಂದ ಟ್ರಾಫಿಕ್ ಜಾಮ್ ಬೇರೆ ಉಂಟಾಗಿದ್ದು ಜನರನ್ನ ಚದುರಿಸೋಕೆ ಪೊಲೀಸರು ಹರಸಾಹಸ ಪಡುವಂತಾಯ್ತು. ಇನ್ನು ಈ ಬಿರಿಯಾನಿ ಪ್ಯಾಕೇಟ್ಗಳನ್ನ ಹಸಿವಿನಿಂದ ಬಳಲುತ್ತಿದ್ದವರಿಗೆ ನೀಡಿದ್ದಾರೆ ಎನ್ನಲಾಗಿದೆ.