ಕೊರೊನಾ ವೈರಸ್ ಜನರ ಜೀವನ ಬದಲಿಸಿದೆ. ಕೊರೊನಾ ಸಾಂಕ್ರಾಮಿಕ ರೋಗ ಜನರ ಜೀವನ ಶೈಲಿ ಮಾತ್ರ ಬದಲಿಸಿಲ್ಲ, ಜನರ ನಿದ್ರೆಯನ್ನು ಕಸಿದುಕೊಂಡಿದೆ.
ಹೊಸ ಸಂಶೋಧನೆಯ ಪ್ರಕಾರ, ಕೊರೊನಾ ಜನರಲ್ಲಿ ಭಯ ಹುಟ್ಟಿಸಿದೆ. ಜನರಿಗೆ ಸರಿಯಾಗಿ ನಿದ್ರೆ ಬರ್ತಿಲ್ಲ. ನಿದ್ರೆಯಲ್ಲಿ ದುಃಸ್ವಪ್ನ ಕಾಡ್ತಿದೆಯಂತೆ.
ಹಾರ್ವರ್ಡ್ ವೈದ್ಯಕೀಯ ಶಾಲೆಯ ಮನೋವೈದ್ಯಕೀಯ ಪ್ರಾಧ್ಯಾಪಕರು ಸಂಶೋಧನೆಯೊಂದನ್ನು ನಡೆಸಿದ್ದಾರೆ. ಇದು ಆನ್ಲೈನ್ ಸಮೀಕ್ಷೆಯಾಗಿತ್ತು. ಸಮೀಕ್ಷೆಯಲ್ಲಿ ಎರಡೂವರೆ ಸಾವಿರ ಜನರು ಪಾಲ್ಗೊಂಡಿದ್ದರು. ಈ ಸಮೀಕ್ಷೆಯಲ್ಲಿ ಆಘಾತಕಾರಿ ಅಂಕಿ ಅಂಶಗಳು ಹೊರ ಬಂದಿವೆ. ಲಾಕ್ ಡೌನ್ ನಂತ್ರ ಜನರಿಗೆ ಸರಿಯಾಗಿ ನಿದ್ರೆ ಬರ್ತಿಲ್ಲವಂತೆ. ಭಯಾನಕ ಕನಸುಗಳು ಬೀಳ್ತಿವೆಯಂತೆ,
ಈ ಸಮಸ್ಯೆಗೆ ಕೊರೊನಾ ವೈರಸ್ ಕಾರಣವೆಂದು ವಿಜ್ಞಾನಿಗಳು ಹೇಳಿದ್ದಾರೆ. ಕೊರೊನಾದಿಂದ ಬದಲಾದ ಜೀವನ ಶೈಲಿ ನಿದ್ರೆ ಮೇಲೆ ಪ್ರಭಾವ ಬೀರ್ತಿದೆ. ಆರಾಮದಾಯಕ ನಿದ್ರೆ ಬರ್ತಿಲ್ಲ. ಜನರು ಕೆಟ್ಟ ಕನಸುಗಳಿಂದ ತೊಂದರೆಗೊಳಗಾಗ್ತಿದ್ದಾರೆಂದು ವಿಜ್ಞಾನಿಗಳು ಹೇಳಿದ್ದಾರೆ. ದುಃಸ್ವಪ್ನ ಬೀಳಲು ಮಾನಸಿಕ ಒತ್ತಡ ಕಾರಣವಾಗ್ತಿದೆ. ಸಾಮಾಜಿಕ ಅಂತರ ಮತ್ತು ಪ್ರತ್ಯೇಕತೆಯಿಂದಾಗಿ 2020ರಲ್ಲಿ ಜನರು ಒತ್ತಡ ಅನುಭವಿಸುತ್ತಿದ್ದಾರೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.