ಕರೊನಾ ವೈರಸ್ ಸೋಂಕು ಹರಡುವಿಕೆ ಕಡಿಮೆ ಮಾಡುವುದಕ್ಕಾಗಿ ವಿಶ್ವದ ಎಲ್ಲ ರಾಷ್ಟ್ರಗಳು ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನ ಕಡ್ಡಾಯ ಮಾಡಿದೆ.
ಜನನಿಬಿಡ ಪ್ರದೇಶದಲ್ಲಿ ಸಾಮಾಜಿಕ ಅಂತರ ಕಾಪಾಡೋದು ಕಡ್ಡಾಯ. ಆದರೆ ಇಟಲಿಯ ನಾರ್ಟೋಸ್ ಎಂಬ ಊರಿನಲ್ಲಿ ಇರೋದು ಇಬ್ಬರೇ ವೃದ್ಧರಾದರೂ ಸಹ ಅವರು ಕರೊನಾ ವಿರುದ್ಧ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ನಿವೃತ್ತಿ ಜೀವನ ಸಾಗಿಸುತ್ತಿರುವ 82 ವರ್ಷದ ಜಿಯೋವಾನಿ ಕರಿಲ್ಲಿ ಹಾಗೂ 74 ವರ್ಷದ ಜಿಯಾಂಪಿಯೊ ನೊಬಿಲಿ ಮಾಸ್ಕ್ ಧರಿಸೋದನ್ನ ಮರೆಯೋದೇ ಇಲ್ಲ. ಅಲ್ಲದೇ ಇವರಿಬ್ಬರು ಒಬ್ಬರನ್ನೊಬ್ಬರು ಮುಖಾಮುಖಿಯಾಗೋದು 1 ಮೀಟರ್ ಅಂತರದಲ್ಲೇ
ಉಂಬ್ರಿಯಾದ ಪೆರುಜಿಯಾ ಪ್ರಾಂತ್ಯದಲ್ಲಿರುವ ಈ ಊರು 900 ಮೀಟರ್ ಎತ್ತರದಲ್ಲಿ ಇದೆ. ಊರಿನ ಹೊರಗಿರೋ ನಮ್ಮ ಕಾಳಜಿ ಯಾರು ವಹಿಸದಿದ್ದರೆ ಏನಂತೆ ನಾವೇ ವಹಿಸಿಕೊಳ್ತೇನೆ ಅನ್ನೋ ಇವರಿಬ್ಬರು ಕರೊನಾ ತಡೆಗೆ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.