ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ವೆಬ್ ಸೈಟ್ನಿಂದ ಮಾಹಿತಿಗಳನ್ನ ಸೋರಿಕೆ ಮಾಡಲಾಗಿದೆ. ಸೋರಿಕೆ ಮಾಡಲಾದ ದಾಖಲೆಯಲ್ಲಿ ಲಕ್ಷಾಂತರ ಜನರ ಹೆಸರು, ಇ ಮೇಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆಗಳು ಇವೆ ಅಂತಾ ಹೇಳಲಾಗ್ತಾ ಇದೆ. ಕಳೆದ ತಿಂಗಳಷ್ಟೇ ಪ್ರಧಾನಿ ಮೋದಿ ವೈಯಕ್ತಿಕ ವೆಬ್ಸೈಟ್ನ್ನ ಸೈಬರ್ ಕ್ರಿಮಿನಲ್ಗಳು ಹ್ಯಾಕ್ ಮಾಡಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೈಬರ್ ಸೆಕ್ಯೂರಿಟಿ ಸಂಸ್ಥೆ ಪ್ರಧಾನಿ ಮೋದಿಯವರ ವೈಯಕ್ತಿಕ ವೆಬ್ಸೈಟ್ ನರೇಂದ್ರಮೋದಿ ಡಾಟ್ ಇನ್ನಿಂದ ಅಕ್ಟೋಬರ್ 10ರಂದು ದಾಖಲಾದ ಮಾಹಿತಿಗಳನ್ನ ಸೋರಿಕೆ ಮಾಡಲಾಗಿದೆ. ಸೋರಿಕೆಯಾದ ದಾಖಲೆಯಲ್ಲಿ 5,74,000 ಮಂದಿ ಬಳಕೆದಾರರ ಮಾಹಿತಿ ಇದೆ. ಇದರಲ್ಲಿ 2,92,000 ಕ್ಕೂ ಹೆಚ್ಚು ಜನರು ವೆಬ್ ಸೈಟ್ ಮೂಲಕ ಪಿಎಂ ನ್ಯಾಷನಲ್ ರಿಲೀಫ್ ಫಂಡ್ಗೆ ದೇಣಿಗೆ ನೀಡಿದವರಾಗಿದ್ದಾರೆ.
ಸೈಬರ್ ಸೆಕ್ಯೂರಿಟಿ ಸಂಸ್ಥೆಯ ಸಿಇಓ ಕೂಡ ಈ ವಿಚಾರವಾಗಿ ಮಾತನಾಡಿದ್ದು ಯಾವ ಕಾರಣಕ್ಕಾಗಿ ಮಾಹಿತಿ ಸೋರಿಕೆ ಮಾಡಲಾಗಿದೆ ಅನ್ನೋದ್ರ ಬಗ್ಗೆ ಇನ್ನೂ ಮಾಹಿತಿ ದೊರಕಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಸೂಚನೆ ನೀಡಲಾಗಿದೆ ಅಂತಾ ಹೇಳಿದ್ರು.