alex Certify ಪ್ರಧಾನಿ ವೈಯಕ್ತಿಕ ವೆಬ್​ಸೈಟ್​ನಿಂದ ಮಾಹಿತಿ ಸೋರಿಕೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ವೈಯಕ್ತಿಕ ವೆಬ್​ಸೈಟ್​ನಿಂದ ಮಾಹಿತಿ ಸೋರಿಕೆ..!

ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ವೆಬ್ ​ಸೈಟ್​ನಿಂದ ಮಾಹಿತಿಗಳನ್ನ ಸೋರಿಕೆ ಮಾಡಲಾಗಿದೆ. ಸೋರಿಕೆ ಮಾಡಲಾದ ದಾಖಲೆಯಲ್ಲಿ ಲಕ್ಷಾಂತರ ಜನರ ಹೆಸರು, ಇ ಮೇಲ್​ ವಿಳಾಸ ಹಾಗೂ ಮೊಬೈಲ್​ ಸಂಖ್ಯೆಗಳು ಇವೆ ಅಂತಾ ಹೇಳಲಾಗ್ತಾ ಇದೆ. ಕಳೆದ ತಿಂಗಳಷ್ಟೇ ಪ್ರಧಾನಿ ಮೋದಿ ವೈಯಕ್ತಿಕ ವೆಬ್​ಸೈಟ್​ನ್ನ ಸೈಬರ್​ ಕ್ರಿಮಿನಲ್​ಗಳು ಹ್ಯಾಕ್​ ಮಾಡಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೈಬರ್​ ಸೆಕ್ಯೂರಿಟಿ ಸಂಸ್ಥೆ ಪ್ರಧಾನಿ ಮೋದಿಯವರ ವೈಯಕ್ತಿಕ ವೆಬ್​ಸೈಟ್​ ನರೇಂದ್ರಮೋದಿ ಡಾಟ್​ ಇನ್​ನಿಂದ ಅಕ್ಟೋಬರ್​ 10ರಂದು ದಾಖಲಾದ ಮಾಹಿತಿಗಳನ್ನ ಸೋರಿಕೆ ಮಾಡಲಾಗಿದೆ. ಸೋರಿಕೆಯಾದ ದಾಖಲೆಯಲ್ಲಿ 5,74,000 ಮಂದಿ ಬಳಕೆದಾರರ ಮಾಹಿತಿ ಇದೆ. ಇದರಲ್ಲಿ 2,92,000 ಕ್ಕೂ ಹೆಚ್ಚು ಜನರು ವೆಬ್​ ಸೈಟ್​ ಮೂಲಕ ಪಿಎಂ ನ್ಯಾಷನಲ್​ ರಿಲೀಫ್​ ಫಂಡ್​ಗೆ ದೇಣಿಗೆ ನೀಡಿದವರಾಗಿದ್ದಾರೆ.

ಸೈಬರ್​ ಸೆಕ್ಯೂರಿಟಿ ಸಂಸ್ಥೆಯ ಸಿಇಓ ಕೂಡ ಈ ವಿಚಾರವಾಗಿ ಮಾತನಾಡಿದ್ದು ಯಾವ ಕಾರಣಕ್ಕಾಗಿ ಮಾಹಿತಿ ಸೋರಿಕೆ ಮಾಡಲಾಗಿದೆ ಅನ್ನೋದ್ರ ಬಗ್ಗೆ ಇನ್ನೂ ಮಾಹಿತಿ ದೊರಕಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಸೂಚನೆ ನೀಡಲಾಗಿದೆ ಅಂತಾ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...