alex Certify ಗಿನ್ನಿಸ್ ದಾಖಲೆಗೆ ಪಾತ್ರವಾಗುತ್ತಿದೆ ತೂಕ ಇಳಿಸಲು ಶುರುಮಾಡಿದ ವಾಕಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಿನ್ನಿಸ್ ದಾಖಲೆಗೆ ಪಾತ್ರವಾಗುತ್ತಿದೆ ತೂಕ ಇಳಿಸಲು ಶುರುಮಾಡಿದ ವಾಕಿಂಗ್

Punjab-born Irish Man Walks over 40,000 Km in His Own City to Eye 'Earth Walk' Record

ತಮ್ಮ ನಡಿಗೆ ಮೂಲಕವೇ ದಾಖಲೆ ಬರೆಯಲು ಹೊರಟ ಪಂಜಾಬ್​ ಮೂಲದ ಐರ್ಲೆಂಡ್​ ನಿವಾಸಿ 40,075 ಕಿಲೋ ಮೀಟರ್​ ದೂರ ಕ್ರಮಿಸಿ ಗಿನ್ನೆಸ್​ ದಾಖಲೆಗಾಗಿ ಅರ್ಜಿ ಸಲ್ಲಿಸಿದ್ದಾರೆ.

70 ವರ್ಷದ ವಿನೋದ್​ ಬಜಾಜ್​ ತಮ್ಮ ತೂಕವನ್ನ ಇಳಿಸಿಕೊಳ್ಳೋಕೆ ಅಂತಾ ನಡಿಗೆ ಪ್ರಾರಂಭಿಸಿದ್ರು. ವಾಕಿಂಗ್ ​ನ ಮೊದಲ ಮೂರು ತಿಂಗಳಲ್ಲಿ 8 ಕೆಜಿ ಇಳಿಸಿದ್ದ ವಿನೋದ್​ ಮುಂದಿನ ಆರು ತಿಂಗಳಲ್ಲಿ 12 ಕೆಜಿ ತೂಕ ಕಳೆದುಕೊಂಡ್ರು. ಅವರ ದೇಹದಲ್ಲಾದ ಈ ಬದಲಾವಣೆ ವಿನೋದ್​ಗೆ ಮತ್ತಷ್ಟು ವಾಕಿಂಗ್​ ಮಾಡೋಕೆ ಪ್ರೇರಣೆಯನ್ನ ನೀಡಿತು.

ಆಗಸ್ಟ್ 2016ರಿಂದ ತೂಕ ಇಳಿಸಬೇಕು ಎಂದು ಆರಂಭಿಸಿದ ವಾಕಿಂಗ್​ ಇಂದು ವಿಶ್ವದಾಖಲೆ ಬರೆಯುವ ಮಟ್ಟಿಗೆ ಬಂದು ನಿಂತಿದೆ. ನಿವೃತ್ತ ಇಂಜಿನಿಯರ್​ ಆಗಿರೋ ವಿನೋದ್​ ಬೆಳೆದಿದ್ದು ಚೆನ್ನೈನಲ್ಲಿ. 1975ರಲ್ಲಿ ಸ್ಕಾಟ್ಲೆಂಡ್​ಗೆ ತೆರಳಿದ ಅವ್ರು ಬಳಿಕ ಕೆಲಸದ ನಿಮಿತ್ತ ಐರ್ಲೆಂಡ್​ಗೆ ಶಿಫ್ಟ್ ಆಗಿದ್ದಾರೆ.

ವಾಕಿಂಗ್​ ಶುರು ಮಾಡಿದ 1 ವರ್ಷದ ಅಂತ್ಯದಲ್ಲಿ ವಿನೋದ್​ 7,600 ಕಿಲೋಮೀಟರ್​ ದೂರವನ್ನ ಕ್ರಮಿಸಿದ್ದರು. ಅಲ್ಲದೇ ಅವರು ಐರ್ಲೆಂಡ್​ನಿಂದ ಭಾರತಕ್ಕೆ ಬಂದು ತಲುಪಿದ್ದರು. ಮತ್ತೆ ತಮ್ಮ ಯಾನವನ್ನ ಮುಂದುವರಿಸಿದ ವಿನೋದ್​ ಎರಡನೇ ವರ್ಷ ಮುಗಿಯುವ ಹೊತ್ತಿಗೆ 15,200 ಕಿಲೋಮೀಟರ್​ ಕ್ರಮಿಸಿದ್ದರು. ಇದು ಚಂದ್ರನ ಸುತ್ತಳತೆ(10,921 ಕಿಮೀ)ಗಿಂತಲೂ ಹೆಚ್ಚಿನ ದೂರವಾಗಿತ್ತು. ಇದರಿಂದ ಮತ್ತಷ್ಟು ಪ್ರೇರಣೆ ಪಡೆದ ವಿನೋದ್​ ಮಂಗಳ ಗ್ರಹದ ಸುತ್ತಳತೆ (21,431 ಕಿಮೀ) ದೂರ ಕ್ರಮಿಸಲು ನಿರ್ಧರಿಸಿದ್ರು.

ಸೆಪ್ಟೆಂಬರ್​ 21ರಂದು ವಿನೋದ್​​ ತಮ್ಮ ಭೂಮಿ ಪರ್ಯಟನೆಯನ್ನ ಸಮಾಪ್ತಿ ಮಾಡಿದ್ರು. 1496 ದಿನಗಳ ಈ ಯಾನದಲ್ಲಿ ವಿನೋದ್​ ಕ್ರಮಿಸಿದ್ದು 40,075 ಕಿಲೋಮೀಟರ್​ ಅಂದ್ರೆ 54633125 ಹೆಜ್ಜೆಗಳು. ವಿನೋದ್​ರ ಈ ಸಾಧನೆಗೆ ಲಾಕ್​ಡೌನ್​ ಹಾಗೂ ಕೋವಿಡ್​ ಕೂಡ ಅಡ್ಡಿ ನೀಡಿತ್ತು. ಲಾಕ್​ಡೌನ್​ ನಿಂದಾಗಿ ಎಷ್ಟೋ ಬಾರಿ ವಿನೋದ್​ ಕ್ರಮಿಸಿದ್ದ ರಸ್ತೆಗಳಲ್ಲಿಯೇ ಮತ್ತೆ ಕ್ರಮಿಸಿದ್ದಾರಂತೆ. ವಾಕಿಂಗ್​​ ಮಾಡಲು ಶಕ್ತಿ ತುಂಬಲಿಕ್ಕಾಗಿ ವಿನೋದ್​ ಗೋಡಂಬಿ, ಆಲ್ಮಂಡ್​, ವಾಲ್ನಟ್​ ಹಾಗೂ ಬಾಳೆಹಣ್ಣನ್ನ ಸೇವಿಸುತ್ತಿದ್ದರಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...