ಬಾಲಿವುಡ್ ನಟಿ ಕಂಗನಾ ರಣಾವತ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬಾಂದ್ರಾ ಕೋರ್ಟ್ ಬಾಂದ್ರಾ ಪೊಲೀಸರಿಗೆ ಕಂಗನಾ ಹಾಗೂ ಆಕೆಯ ಸಹೋದರಿ ರಂಗೋಲಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸೂಚನೆ ನೀಡಿದೆ.
ಕಂಗನಾ ಹಾಗೂ ಆಕೆಯ ಸಹೋದರಿ ಪದೇ ಪದೇ ಟ್ವಿಟರ್ನಲ್ಲಿ ಬಾಲಿವುಡ್ ಹಾಗೂ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಆಕ್ಷೇಪಾರ್ಹ ಬರಹಗಳನ್ನ ಹಾಕ್ತಿದ್ದಾರೆ ಅಂತಾ ಆರೋಪಿಸಿ ಮುನ್ನಾರ್ವಾಮಿ ಅಕಾ ಸಾಹಿಲ್ ಅಸ್ರಫ್ ಅಲಿ ಎಂಬವರು ದೂರು ನೀಡಿದ್ದರು.
ಅಲ್ಲದೇ ಕಂಗನಾ ಹಾಗೂ ರಂಗೋಲಿಯ ಟ್ವೀಟ್ಗಳು ಕೋಮು ಗಲಭೆಯನ್ನ ಉತ್ತೇಜಿಸುವಂತಿದೆ ಅಂತಾ ದೂರಿದ್ದರು. ಅಸ್ರಫ್ ಅಲಿ ಮೊದಲು ಬಾಂದ್ರಾ ಪೊಲೀಸ್ ಠಾಣೆಗೆ ದೂರು ನೀಡೋಕೆ ತೆರಳಿದ್ದಾರೆ. ಆದರೆ ಪೊಲೀಸರು ದೂರು ಬರೆದುಕೊಳ್ಳಲು ನಿರಾಕರಿಸಿದ್ದರು.
ಕೆಲ ದಿನಗಳ ಹಿಂದಷ್ಟೇ ಕಂಗನಾ ವಿರುದ್ದ ತುಮಕೂರು ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ರೈತರಿಗೆ ಅವಮಾನ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿತ್ತು.