alex Certify
ಕನ್ನಡ ದುನಿಯಾ       Mobile App
       

Kannada Duniya

BIG NEWS: ಬಾಲಿವುಡ್​ ನಟಿ ಕಂಗನಾ ವಿರುದ್ಧ ಮತ್ತೊಂದು ಕೇಸ್​…!

ಬಾಲಿವುಡ್​​ ನಟಿ ಕಂಗನಾ ರಣಾವತ್​​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬಾಂದ್ರಾ ಕೋರ್ಟ್​ ಬಾಂದ್ರಾ ಪೊಲೀಸರಿಗೆ ಕಂಗನಾ ಹಾಗೂ ಆಕೆಯ ಸಹೋದರಿ ರಂಗೋಲಿ ವಿರುದ್ಧ ಎಫ್​ಐಆರ್​ ದಾಖಲಿಸುವಂತೆ ಸೂಚನೆ ನೀಡಿದೆ.

ಕಂಗನಾ ಹಾಗೂ ಆಕೆಯ ಸಹೋದರಿ ಪದೇ ಪದೇ ಟ್ವಿಟರ್​ನಲ್ಲಿ ಬಾಲಿವುಡ್​ ಹಾಗೂ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಆಕ್ಷೇಪಾರ್ಹ ಬರಹಗಳನ್ನ ಹಾಕ್ತಿದ್ದಾರೆ ಅಂತಾ ಆರೋಪಿಸಿ ಮುನ್ನಾರ್​ವಾಮಿ ಅಕಾ ಸಾಹಿಲ್​ ಅಸ್ರಫ್​ ಅಲಿ ಎಂಬವರು ದೂರು ನೀಡಿದ್ದರು.

ಅಲ್ಲದೇ ಕಂಗನಾ ಹಾಗೂ ರಂಗೋಲಿಯ ಟ್ವೀಟ್​ಗಳು ಕೋಮು ಗಲಭೆಯನ್ನ ಉತ್ತೇಜಿಸುವಂತಿದೆ ಅಂತಾ ದೂರಿದ್ದರು. ಅಸ್ರಫ್​ ಅಲಿ ಮೊದಲು ಬಾಂದ್ರಾ ಪೊಲೀಸ್​ ಠಾಣೆಗೆ ದೂರು ನೀಡೋಕೆ ತೆರಳಿದ್ದಾರೆ. ಆದರೆ ಪೊಲೀಸರು ದೂರು ಬರೆದುಕೊಳ್ಳಲು ನಿರಾಕರಿಸಿದ್ದರು.

ಕೆಲ ದಿನಗಳ ಹಿಂದಷ್ಟೇ ಕಂಗನಾ ವಿರುದ್ದ ತುಮಕೂರು ಜಿಲ್ಲೆಯ ಪೊಲೀಸ್​ ಠಾಣೆಯಲ್ಲಿ ರೈತರಿಗೆ ಅವಮಾನ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...