ಗುಜರಾತ್ನ ಫ್ಯಾಶನ್ ಡಿಸೈನಿಂಗ್ ವಿಭಾಗದ ವಿದ್ಯಾರ್ಥಿಗಳು ಪಿಪಿಇ ಕಿಟ್ ಬಳಸಿ ತಯಾರಿಸಿದ ವಸ್ತ್ರ ಧರಿಸಿ ಸಾಂಪ್ರದಾಯಿಕ ಗರ್ಭಾ ನೃತ್ಯ ಪ್ರದರ್ಶಿಸಿದ್ದಾರೆ.
ಗುಜರಾತ್ನಲ್ಲಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಗರ್ಬಾ ನೃತ್ಯವನ್ನ ಮಾಡಲಾಗುತ್ತೆ. ಆದರೆ ಈ ಬಾರಿ ಕರೊನಾ ವೈರಸ್ ಹಬ್ಬದ ಸಂಭ್ರಮವನ್ನ ನುಂಗಿ ಹಾಕಿದೆ. ಹೀಗಾಗಿ ಸೂರತ್ನಲ್ಲಿ ಐಡಿಟಿ ವಿದ್ಯಾರ್ಥಿಗಳು ಪಿಪಿಇ ಕಿಟ್ನಿಂದ ತಾವೇ ವಿನ್ಯಾಸಗೊಳಿಸಿದ ಡ್ರೆಸ್ಗಳನ್ನ ಧರಿಸಿ ಗರ್ಭಾ ಡ್ಯಾನ್ಸ್ ಮಾಡಿದ್ದಾರೆ.
ಆರುಷಿ ಉಪ್ರೇತಿ ಮಾರ್ಗದರ್ಶನದಲ್ಲಿ ಐಡಿಟಿಯ ಪ್ರಥಮ ವರ್ಷದ ವಿದ್ಯಾರ್ಥಿಗಳು ಈ ವಸ್ತ್ರವನ್ನ ವಿನ್ಯಾಸಗೊಳಿಸಿದ್ದಾರೆ. ಪಿಪಿಇ ಕಿಟ್ನಿಂದ ತಯಾರಾದ ಈ ಡ್ರೆಸ್ಗಳಿಗೆ ಕನ್ನಡಿಯ ಚೂರುಗಳನ್ನ ಬಳಸಿ ಡಿಸೈನ್ ಮಾಡಲಾಗಿದೆ. ಗರ್ಭಾ ನೃತ್ಯ ಪ್ರದರ್ಶನದ ವೇಳೆ ವಿದ್ಯಾರ್ಥಿಗಳು ಮಾಸ್ಕ್ ಹಾಕಿದ್ದು ಮಾತ್ರವಲ್ಲದೇ ಸಾಮಾಜಿಕ ಅಂತರವನ್ನೂ ಕಾಪಾಡಿಕೊಂಡಿದ್ದಾರೆ.