ಪ್ಯಾರಾಚೂಟ್ ಹಾರಾಡ್ತಾ ಇದ್ದ ಜೋಡಿಯೊಂದು ಸೆಲ್ಫಿ ತೆಗೆದುಕೊಳ್ತಿದ್ದ ವೇಳೆ ಸೆಲ್ಫಿ ಸ್ಟಿಕ್ ಮೇಲೆ ರಣಹದ್ದೊಂದು ಬಂದು ಕುಳಿತು ಅಚ್ಚರಿ ಮೂಡಿಸಿದೆ.
ಪ್ಯಾರಾಗ್ಲೈಡಿಂಗ್ ಮಾಡಲು ಹೆಸರಾಂತ ತಾಣವಾದ ಸ್ಪೇನ್ನ ಅಲ್ಗೊಡೋನೆಲ್ಸ್ನಲ್ಲಿರುವ ಸುಂದರವಾದ ಪರ್ವತದಲ್ಲಿ ಹಾರಾಡುತ್ತಿದ್ದ ಜೋಡಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದೆ. ಕೂಡಲೇ ಅದೆಲ್ಲಿಂದಲೋ ಬಂದ ರಣಹದ್ದು ಸೆಲ್ಫಿ ಸ್ಟಿಕ್ನ ಮೇಲೆ ಕೆಲ ಕಾಲ ಕೂತಿದೆ.
ಒಮ್ಮೆ ಹಾರಾಟ ಮಾಡಲು ಮುಂದಾದ ರಣಹದ್ದು ಮತ್ತೆ ಅದೇ ಸೆಲ್ಫಿ ಸ್ಟಿಕ್ ಮೇಲೆ ಬಂದು ಕುಳಿತುಕೊಂಡಿದೆ. ಆಮೇಲೆ ಅಲ್ಲಿಂದ ಹಾರಿ ಹೋಗಿದೆ. ಟಿಕ್ಟಾಕ್ನಲ್ಲಿ ಶೇರ್ ಮಾಡಲಾಗಿರುವ ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದ ತುಂಬೆಲ್ಲ ಹರಿದಾಡ್ತಿದೆ.
https://twitter.com/DavidSt60360974/status/1316806781352529921?ref_src=twsrc%5Etfw%7Ctwcamp%5Etweetembed%7Ctwterm%5E1316806781352529921%7Ctwgr%5Eshare_3%2Ccontainerclick_1&ref_url=https%3A%2F%2Findianexpress.com%2Farticle%2Ftrending%2Ftrending-globally%2Fvulture-hitches-ride-on-paragliders-selfie-stick-6755145%2F
https://twitter.com/Yukangarooo/status/1316797251088343040?ref_src=twsrc%5Etfw%7Ctwcamp%5Etweetembed%7Ctwterm%5E1316797251088343040%7Ctwgr%5Eshare_3%2Ccontainerclick_1&ref_url=https%3A%2F%2Findianexpress.com%2Farticle%2Ftrending%2Ftrending-globally%2Fvulture-hitches-ride-on-paragliders-selfie-stick-6755145%2F