![](https://kannadadunia.com/wp-content/uploads/2020/10/82287478-73ed-416b-9c08-9110f6d4e371.jpg)
ಬಾಲಿವುಡ್ನ ಡ್ರೀಮ್ ಗರ್ಲ್ ಎಂದು ಹೆಸರು ಮಾಡಿದ್ದ ನಟಿ ಹೇಮಾಮಾಲಿನಿ 72ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ತನ್ನ ವಿಭಿನ್ನ ಪಾತ್ರಗಳ ಮೂಲಕ ಬೆಳ್ಳಿ ತೆರೆಯಲ್ಲಿ ಕಮಾಲ್ ಮಾಡಿದ್ದ ಈ ನಟಿ ಅಂದಿನ ಕಾಲದಲ್ಲಿ ಅಭಿಮಾನಿಗಳ ಎದೆಯಲ್ಲಿ ಹಲ್ಚಲ್ ಎಬ್ಬಿಸಿದವರು. 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋ ಈ ಚೆಲುವೆ ಈಗಲೂ ಕೂಡ ತಮ್ಮ ಸೌಂದರ್ಯವನ್ನ ಹಾಗೆಯೇ ಕಾಪಾಡಿಕೊಂಡು ಬಂದಿದ್ದಾರೆ.
1975ರಲ್ಲಿ ಬಂದ ಶೋಲೆ ಸಿನಿಮಾ ಬಾಲಿವುಡ್ನ ಸಿನಿಮಾ ಗತ್ತನ್ನೇ ಬೇರೆ ದಿಕ್ಕಿಗೆ ಕರೆದುಕೊಂಡು ಹೋಯ್ತು. ಅಮಿತಾಭ್ ಬಚ್ಚನ್, ಧರ್ಮೇಂದ್ರ, ಸಂಜೀವ್ ಕುಮಾರ್, ಜಯಾ ಬಚ್ಚನ್ ರಂತಹ ಘಟಾನುಘಟಿ ಕಲಾವಿದರೇ ಇದ್ದ ಈ ಸಿನಿಮಾದಲ್ಲಿ ಬಸಂತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಹೇಮಾಮಾಲಿನಿ ಆಕ್ಟಿಂಗ್ ಬಗ್ಗೆ ಮಾತಾಡೋ ಹಾಗೇ ಇಲ್ಲ. ಈ ಸಿನಿಮಾ ಬಂದು 45 ವರ್ಷಗಳೇ ಕಳೆದ್ರೂ ಈಗಲೂ ಬಸಂತಿಯ ಫೇಮಸ್ ಡೈಲಾಗ್ ‘ಯೂ ಕಿ ಯೇ ಕೌನ್ ಬೋಲಾ’ ಇನ್ನೂ ಚಾಲ್ತಿಯಲ್ಲಿದೆ.
ಸೀತಾ ಔರ್ ಗೀತಾ ಸಿನಿಮಾದಲ್ಲಿ ಡಬಲ್ ಆಕ್ಟಿಂಗ್ನಲ್ಲಿ ಕಾಣಿಸಿಕೊಂಡ ಹೇಮಾ ಮಾಲಿನಿ ಆ ಸಿನಿಮಾದ ಮೂಲಕವೂ ಸಾಕಷ್ಟು ಅಭಿಮಾನಿಗಳನ್ನ ಸಂಪಾದಿಸಿದ್ರು. 1977ರಲ್ಲಿ ರಿಲೀಸ್ ಆದ ಡ್ರೀಮ್ ಗರ್ಲ್ ಸಿನಿಮಾದಲ್ಲಿ ಹೇಮಾ ಮಾಲಿನಿ ಒಬ್ಬರೇ 5 ಪಾತ್ರಗಳಿಗೆ ಜೀವ ತುಂಬುವ ಮೂಲಕ ತಾನೊಬ್ಬ ವರ್ಸಟೈಲ್ ಆಕ್ಟ್ರೆಸ್ ಅನ್ನೋದನ್ನ ಪ್ರೂವ್ ಮಾಡಿದ್ರು.
1982ರಲ್ಲಿ ತೆರೆ ಕಂಡ ಸತ್ತೇ ಪೆ ಸತ್ತಾ ಸಿನಿಮಾ ಕೂಡ ಹೇಮಾಮಾಲಿನಿ ಒಬ್ಬ ಅದ್ಭುತ ಕಲಾವಿದೆ ಅನ್ನೋದನ್ನ ಇನ್ನೊಮ್ಮೆ ಪ್ರೂವ್ ಮಾಡ್ತು. ಅಮಿತಾಬ್ ಬಚ್ಚನ್, ಸಚಿನ್ ಪಿಲ್ಗಾಂವಕರ್, ಅಮ್ಜಾದ್ ಖಾನ್, ಶಕ್ತಿ ಕಪೂರ್ ಸೇರಿದಂತೆ ಅನೇಕ ಮಹಾನ್ ನಟರಿದ್ದ ಸಿನಿಮಾದಲ್ಲೂ ನಟಿಸಿದ್ದ ಹೇಮಾ ತನ್ನ ಪಾತ್ರಕ್ಕೆ ಜೀವ ತುಂಬಿದ್ರು.
ಹೇಮಾಮಾಲಿನಿ ನಟಿಸಿದ ಬಹುತೇಕ ಸಿನಿಮಾಗಳಲ್ಲಿ ಆಕೆಗೆ ಹೀರೋ ಆಗಿದ್ದು ಅವರ ಪತಿ ಧರ್ಮೇಂದ್ರ. ಆದರೆ ಜನ ಹೇಮಾಮಾಲಿನಿಯನ್ನ ಅಮಿತಾಭ್ ಜೊತೆ ನೋಡೋಕೆ ಹೆಚ್ಚು ಇಷ್ಟ ಪಡ್ತಿದ್ರು ಅನ್ನೋ ಮಾತು ಕೂಡ ಸುಳ್ಳಲ್ಲ. 2003ರಲ್ಲಿ ತೆರೆ ಕಂಡ ಭಗಭಾನ್ ಸಿನಿಮಾದಲ್ಲಿ ಹೇಮಾ ಮಾಲಿನಿ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡರು. ಹಾಗೂ ಈ ಸಿನಿಮಾ ಮೂಲಕ ತನಗೆ ವಯಸ್ಸಾಗಿದ್ರೂ ಕೂಡ ತನ್ನ ನಟನಾ ಶೈಲಿಗೆ ವಯಸ್ಸಾಗಿಲ್ಲ ಅನ್ನೋದನ್ನ ಸಾಬೀತು ಪಡಿಸಿದ್ರು.
![](https://kannadadunia.com/wp-content/uploads/2020/10/80d19762-263f-4b3c-b96c-7a29ce3d8226.jpg)
![](https://kannadadunia.com/wp-content/uploads/2020/10/c6f9efbd-0296-4403-90a1-d93b4f5f391f.jpg)
![](https://kannadadunia.com/wp-content/uploads/2020/10/1fdff066-401e-42a5-85f3-68fd7e016575.jpg)