ತೈವಾನ್ ಅಧ್ಯಕ್ಷೆ ಸೈಂಗ್ ವೆನ್ ತಮ್ಮ ಟ್ವಿಟರ್ ಖಾತೆಯಲ್ಲಿ ಭಾರತೀಯ ಆಹಾರದ ಮೇಲಿನ ಪ್ರೀತಿಯನ್ನ ಬಹಿರಂಗಪಡಿಸಿದ್ದಾರೆ. ಭಾರತವನ್ನ ರೋಮಾಂಚಕ, ವೈವಿಧ್ಯಮಯ ಹಾಗೂ ವರ್ಣರಂಜಿತ ಎಂದು ಹೊಗಳಿರೋ ತೈವಾನ್ ಅಧ್ಯಕ್ಷೆ ಚನಾ ಮಸಾಲಾ ಹಾಗೂ ನಾನ್ ನನ್ನ ಫೇವರಿಟ್ ಅಂತಾ ಬರೆದುಕೊಂಡಿದ್ದಾರೆ.
ಚನ್ನಾ ಮಸಾಲಾ ಹಾಗೂ ನಾನ್ ಜೊತೆ ಚಹ ಕೂಡ ಸೈಂಗ್ ವೆನ್ರ ಫೇವರಿಟ್ ಆಗಿದ್ದು, ಅದು ಭಾರತವನ್ನ ಇನ್ನಷ್ಟು ನೆನೆಸಿಕೊಳ್ಳುವಂತೆ ಮಾಡುತ್ತೆ ಅಂತಾರೆ ತೈವಾನ್ ಅಧ್ಯಕ್ಷೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಚನ್ನಾ ದಾಲ್ ಹಾಗೂ ನಾನ್ ಫೋಟೋವನ್ನ ಶೇರ್ ಮಾಡಿರೋ ಸೈಂಗ್ ವೆನ್, ತೈವಾನ್ನಲ್ಲಿ ಭಾರತೀಯ ಮೂಲದ ರೆಸ್ಟೋರೆಂಟ್ಗಳು ಇರೋದು ನಮ್ಮ ಅದೃಷ್ಟ. ನಾನು ಚನ್ನಾ ಮಸಾಲಾ ಹಾಗೂ ನಾನ್ ಸವಿಯಲಿಕ್ಕೋಸ್ಕರ ಭಾರತೀಯ ರೆಸ್ಟೋರೆಂಟ್ಗೆ ಭೇಟಿ ನೀಡುತ್ತೇನೆ. ನಿಮಗೆ ಭಾರತೀಯ ಭಕ್ಷ್ಯಗಳಲ್ಲಿ ಯಾವುದು ಇಷ್ಟ..? ಅಂತಾ ಟ್ವಿಟರ್ನಲ್ಲಿ ಪ್ರಶ್ನೆ ಮಾಡಿದ್ದಾರೆ.
1.3 ಮಿಲಿಯನ್ ಫಾಲೋವರ್ಸ್ ಹೊಂದಿರೋ ಸೈಂಗ್ ವೆನ್ ಈ ರೀತಿ ಪ್ರಶ್ನೆ ಹಾಕ್ತಿದ್ದಂತೆಯೇ ನೆಟ್ಟಿಗರು ಕಮೆಂಟ್ ಸೆಕ್ಷನ್ನಲ್ಲಿ ಭಾರತೀಯ ಫುಡ್ಗಳ ಮೆನುವಿನ ಹೊಳೆಯನ್ನೇ ಹರಿಸಿದ್ದಾರೆ.