ವಿಜಯದ ಖುಷಿಯಲ್ಲಿದ್ದ ಆರ್ಸಿಬಿ ಅಭಿಮಾನಿಗಳಿಗೆ ಗುರುವಾರದ ಮ್ಯಾಚ್ ಕೊಂಚ ನಿರಾಸೆ ಮೂಡಿಸಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಮ್ಯಾಚ್ನಲ್ಲಿ ವಿರಾಟ್ ಪಡೆ ಸೋಲು ಕಂಡಿದೆ. ಸೋಲಿನ ಬೇಸರದಲ್ಲಿದ್ರೂ ಕೂಡ ಕ್ಯಾಪ್ಟನ್ ಕೊಹ್ಲಿಯ ವಿಚಿತ್ರ ಡಾನ್ಸ್ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡ್ತಿದ್ದು ಇದನ್ನ ನೋಡಿರೋ ಆರ್ಸಿಬಿ ಫ್ಯಾನ್ಸ್ ಹೊಟ್ಟೆ ಹುಣ್ಣಾಗುವಂತೆ ನಗ್ತಿದ್ದಾರೆ.
ಜತಿನ್ ಎಂಬ ವ್ಯಕ್ತಿ ಟ್ವಿಟರ್ನಲ್ಲಿ ವಿರಾಟ್ ಕೊಹ್ಲಿಯ ಈ ವಿಚಿತ್ರ ಡಾನ್ಸ್ ವಿಡಿಯೋವನ್ನ ಶೇರ್ ಮಾಡಿದ್ದಾರೆ. ಮ್ಯಾಚ್ಗೂ ಮುನ್ನ ಕಠಿಣ ಅಭ್ಯಾಸದಲ್ಲಿ ತೊಡಗಿದ್ದ ಕೊಹ್ಲಿ ತಮ್ಮ ಅಭ್ಯಾಸದ ಭಂಗಿಗಳಿಗೆ ಬಾಲಿವುಡ್ ಟಚ್ ನೀಡಿದ್ದಾರೆ.
ಅಂದಹಾಗೆ ವಿರಾಟ್ ಕೊಹ್ಲಿ ತಮ್ಮ ಈ ಟ್ಯಾಲೆಂಟ್ನ್ನ ಹೊರಹಾಕಿರೋದು ಇದೇ ಮೊದಲೇನಲ್ಲ. 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟಿ 20 ಸೆಮಿಫೈನಲ್ ಮ್ಯಾಚ್ ವೇಳೆಯೂ ಬೌಂಡರಿ ಲೈನ್ ಬಳಿ ನಿಂತು ಡಾನ್ಸ್ ಮಾಡಿದ್ದರು. ಸದ್ಯ ವಿರಾಟ್ರ ಈ ಹೊಸ ಡಾನ್ಸ್ ಲಕ್ಷಕ್ಕೂ ಹೆಚ್ಚು ವೀವ್ಸ್ ಸಂಪಾದಿಸಿದೆ.
https://twitter.com/LogicalBakwaas/status/1316732878714142721?ref_src=twsrc%5Etfw%7Ctwcamp%5Etweetembed%7Ctwterm%5E1316732878714142721%7Ctwgr%5Eshare_3%2Ccontainerclick_0&ref_url=https%3A%2F%2Fwww.timesnownews.com%2Fthe-buzz%2Farticle%2Fvirat-kohlis-hilarious-dance-captures-internets-attention-netizens-say-waah-kaptaan-sahab-waah-watch%2F667982
https://twitter.com/ColFool_/status/1316735648359874560?ref_src=twsrc%5Etfw%7Ctwcamp%5Etweetembed%7Ctwterm%5E1316735648359874560%7Ctwgr%5Eshare_3%2Ccontainerclick_1&ref_url=https%3A%2F%2Fwww.timesnownews.com%2Fthe-buzz%2Farticle%2Fvirat-kohlis-hilarious-dance-captures-internets-attention-netizens-say-waah-kaptaan-sahab-waah-watch%2F667982