alex Certify RCB ಸೋಲಿನ ನೋವಿನಲ್ಲೂ ಅಭಿಮಾನಿಗಳಲ್ಲಿ ನಗು ಉಕ್ಕಿಸಿದೆ ಕೊಹ್ಲಿ ಡಾನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

RCB ಸೋಲಿನ ನೋವಿನಲ್ಲೂ ಅಭಿಮಾನಿಗಳಲ್ಲಿ ನಗು ಉಕ್ಕಿಸಿದೆ ಕೊಹ್ಲಿ ಡಾನ್ಸ್

ವಿಜಯದ ಖುಷಿಯಲ್ಲಿದ್ದ ಆರ್​ಸಿಬಿ ಅಭಿಮಾನಿಗಳಿಗೆ ಗುರುವಾರದ ಮ್ಯಾಚ್​ ಕೊಂಚ ನಿರಾಸೆ ಮೂಡಿಸಿದೆ. ಕಿಂಗ್ಸ್​ ಇಲೆವೆನ್​ ಪಂಜಾಬ್​ ವಿರುದ್ಧದ ಮ್ಯಾಚ್​​ನಲ್ಲಿ ವಿರಾಟ್​ ಪಡೆ ಸೋಲು ಕಂಡಿದೆ. ಸೋಲಿನ ಬೇಸರದಲ್ಲಿದ್ರೂ ಕೂಡ ಕ್ಯಾಪ್ಟನ್​ ಕೊಹ್ಲಿಯ ವಿಚಿತ್ರ ಡಾನ್ಸ್ ವಿಡಿಯೋ ಒಂದು ಸೋಶಿಯಲ್​ ಮೀಡಿಯಾದಲ್ಲಿ ಸೌಂಡ್​ ಮಾಡ್ತಿದ್ದು ಇದನ್ನ ನೋಡಿರೋ ಆರ್​ಸಿಬಿ ಫ್ಯಾನ್ಸ್ ಹೊಟ್ಟೆ ಹುಣ್ಣಾಗುವಂತೆ ನಗ್ತಿದ್ದಾರೆ.

ಜತಿನ್​ ಎಂಬ ವ್ಯಕ್ತಿ ಟ್ವಿಟರ್​ನಲ್ಲಿ ವಿರಾಟ್​ ಕೊಹ್ಲಿಯ ಈ ವಿಚಿತ್ರ ಡಾನ್ಸ್ ವಿಡಿಯೋವನ್ನ ಶೇರ್​ ಮಾಡಿದ್ದಾರೆ. ಮ್ಯಾಚ್​ಗೂ ಮುನ್ನ ಕಠಿಣ ಅಭ್ಯಾಸದಲ್ಲಿ ತೊಡಗಿದ್ದ ಕೊಹ್ಲಿ ತಮ್ಮ ಅಭ್ಯಾಸದ ಭಂಗಿಗಳಿಗೆ ಬಾಲಿವುಡ್​ ಟಚ್​ ನೀಡಿದ್ದಾರೆ.

ಅಂದಹಾಗೆ ವಿರಾಟ್​ ಕೊಹ್ಲಿ ತಮ್ಮ ಈ ಟ್ಯಾಲೆಂಟ್​ನ್ನ ಹೊರಹಾಕಿರೋದು ಇದೇ ಮೊದಲೇನಲ್ಲ. 2016ರಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಟಿ 20 ಸೆಮಿಫೈನಲ್​ ಮ್ಯಾಚ್​ ವೇಳೆಯೂ ಬೌಂಡರಿ ಲೈನ್​ ಬಳಿ ನಿಂತು ಡಾನ್ಸ್ ಮಾಡಿದ್ದರು. ಸದ್ಯ ವಿರಾಟ್​ರ ಈ ಹೊಸ ಡಾನ್ಸ್ ಲಕ್ಷಕ್ಕೂ ಹೆಚ್ಚು ವೀವ್ಸ್ ಸಂಪಾದಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...