130 ಮಿಲಿಯನ್ ವರ್ಷಗಳ ಹಿಂದೆ ಭೂಮಿ ಮೇಲೆ ಇತ್ತು ಎನ್ನಲಾದ ಡೈನೋಸಾರ್ ಗಳನ್ನ ನೀವು ಫಿಲಂಗಳಲ್ಲಿ ನೋಡಿರ್ತೀರಾ. ಇನ್ನೂ ಮುಂದುವರಿದು ಅದರ ಅಸ್ಥಿಪಂಜರಗಳನ್ನ ಮ್ಯೂಸಿಯಂಗಳಲ್ಲಿ ಇಲ್ಲವೇ ಫೋಟೋ ರೂಪದಲ್ಲಿ ವೀಕ್ಷಿಸಿರ್ತೀರಾ. ಆದ್ರೆ ಚೀನಾದಲ್ಲಿ ಕೇವಲ 5 ವರ್ಷದ ಬಾಲಕನೊಬ್ಬ ಡೈನೋಸಾರ್ ನ ದೈತ್ಯ ಹೆಜ್ಜೆ ಗುರುತನ್ನ ಪತ್ತೆ ಹಚ್ಚಿದ್ದಾನೆ.
ನೈಋತ್ಯ ಚೀನಾದ ಸಿಚುವಾನ್ ಪ್ರದೇಶದ ಝೇರೈ ಎಂಬ ಹೆಸರಿನ 5 ವರ್ಷದ ಬಾಲಕ ಈ ಹೆಜ್ಜೆ ಗುರುತನ್ನ ಪತ್ತೆ ಹಚ್ಚಿದ್ದಾನೆ. ಇದು ರೆಕ್ಕೆಗಳನ್ನ ಹೊಂದಿದ್ದ ಡೈನೋಸಾರ್ ನ ಹೆಜ್ಜೆ ಗುರುತು ಅಂತಾ ಚೀನಾದ ವಿಶ್ವವಿದ್ಯಾಲಯವೊಂದು ತಿಳಿಸಿದೆ.
ಬಾಲಕ ಪತ್ತೆ ಹಚ್ಚಿದ್ದು ಡೈನೋಸಾರ್ ದ್ದೇ ಹೆಜ್ಜೆ ಗುರುತು ಅಂತಾ ಅಕ್ಟೋಬರ್ 10ರಂದು ವಿಶ್ವವಿದ್ಯಾಲಯ ಧೃಡೀಕರಣಗೊಳಿಸಿದೆ. ಹಕ್ಕಿ ಜಾತಿಯ ಡೈನೋಸಾರ್ ಹೆಜ್ಜೆ ಗುರುತು ಮೂರು ಬೆರಳುಗಳನ್ನ ಹೊಂದಿದೆ.