ನವದೆಹಲಿ: ಕೊರೋನಾ ಲಸಿಕೆ ಅಂತಿಮ ಹಂತದ ಪ್ರಯೋಗ ಯಶಸ್ಸಿನ ಹಾದಿಯಲ್ಲಿದ್ದು, ಕೊರೋನಾ ಲಸಿಕೆ ಲಭ್ಯವಾದರೆ 75 ರೂಪಾಯಿಗೆ ಒಂದು ಡೋಸ್ ನೀಡಲಾಗುವುದು.
ಕೇಂದ್ರ ಸರ್ಕಾರದಿಂದ 75 ರೂಪಾಯಿಗೆ ಒಂದು ಡೋಸ್ ಲಸಿಕೆ ನೀಡಲಾಗುವುದು. ಜನರ ಮೇಲೆ ಕೋವಿಡ್ ಸೆಸ್ ಹೇರಲ್ಲ. ಕೊರೋನಾ ಲಸಿಕೆ ಆರ್ಥಿಕ ಹೊರೆ ತಪ್ಪಿಸಿಕೊಳ್ಳಲು ಸೆಸ್ ಹೇರುವುದಿಲ್ಲ. ಲಸಿಕೆ ಖರೀದಿ, ಮಾರಾಟಕ್ಕೆ ಸರ್ಕಾರದ ಬಳಿ ಹಣವಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂದಿನ ವರ್ಷದ ಆರಂಭದ ವೇಳೆಗೆ ಲಸಿಕೆ ಸಿಗುವ ನಿರೀಕ್ಷೆ ಇದ್ದು ಮಧ್ಯಭಾಗದ ವೇಳೆಗೆ 50 ಕೋಟಿಯಷ್ಟು ಲಸಿಕೆ ವಿತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.