ಹೈದರಾಬಾದ್ನಲ್ಲಿ ವರುಣನ ಆರ್ಭಟ ಮಿತಿ ಮೀರಿದೆ. ಸಿಕಂದರಾಬಾದ್ ಬಳಿ ರಸ್ತೆಗಳು ನದಿಗಳಂತಾಗಿದ್ದು ಭಾರೀ ಮಳೆಗೆ ಕೊಚ್ಚಿ ಹೋದ ಕಾರೊಂದು ಇನ್ನೊಂದು ಕಾರಿನ ಮೇಲೆ ಹೋಗಿ ನಿಂತಿದೆ.
ತೆಲಂಗಾಣ ರಾಜ್ಯದ ಬಹುತೇಕ ಜಿಲ್ಲೆಗಳು ಮಳೆಯ ಹೊಡೆತಕ್ಕೆ ನಲುಗಿ ಹೋಗಿವೆ, ಈಗಾಗಲೇ ಸೋಶಿಯಲ್ ಮೀಡಿಯಾಗಳಲ್ಲಿ ಹೈದರಾಬಾದ್ ಮಳೆಯ ರುದ್ರ ನರ್ತನದ ಸಾಕಷ್ಟು ವಿಡಿಯೋಗಳು ಹರಿದಾಡ್ತಾ ಇವೆ. ಅದರಲ್ಲೂ ಈ ವಿಡಿಯೋವಂತು ಹೈದರಾಬಾದ್ನ ಸದ್ಯದ ಪರಿಸ್ಥಿತಿಗೆ ಹಿಡಿದ ಕೈ ಗನ್ನಡಿಯಾಗಿದೆ.
ಸರೂರ್ ನಗರದ ಗ್ರೀನ್ ಪಾರ್ಕ್ ಸಮೀಪದ ಕಾಲೋನಿಯೊಂದರಲ್ಲಿ ಸೆರೆಯಾದ ವಿಡಿಯೋದಲ್ಲಿ ನೋಡ ನೋಡ್ತಿದ್ದಂತೆ ಒಂದು ಕಾರು ಹಾಗೂ ವ್ಯಾನ್ ಕೊಚ್ಚಿಕೊಂಡು ಹೋಗಿದೆ. ತೆಲಂಗಾಣದಲ್ಲಿ 14 ಜಿಲ್ಲೆಗಳಲ್ಲಿ ಈ ತರಹದ ಸಾಕಷ್ಟು ಘಟನೆಗಳು ವರದಿಯಾಗಿವೆ. ಹೈದರಾಬಾದ್ನಲ್ಲಿ ಕಳೆದ 24 ಗಂಟೆಗಳಲ್ಲಿ 20 ಸೆಂ.ಮೀ. ಮಳೆಯಾಗಿದೆ. ತೆಲಂಗಾಣದಲ್ಲಿ ಕಳೆದ 48 ಗಂಟೆಗಳಲ್ಲಿ 12 ಮಂದಿ ಮಳೆಯಿಂದ ಪ್ರಾಣತೆತ್ತಿದ್ದಾರೆ.