ಇಟಲಿಯ ಪೊಂಪೇಯಿ ಪುರಾತತ್ವ ಸ್ಥಳದಿಂದ ಪ್ರಾಚೀನ ವಸ್ತುಗಳನ್ನ ಕದ್ದಿದ್ದ ಮಹಿಳೆ 15 ವರ್ಷಗಳ ಬಳಿಕ ಆ ವಸ್ತುಗಳನ್ನ ಹಿಂದಿರುಗಿಸಿದ್ದಾಳೆ.
ಕೆನಡಾದ ನಿಕೋಲ್ ಎಂಬ ಹೆಸರಿನ ಮಹಿಳೆ 2005ರಲ್ಲಿ ಪ್ರಾಚೀನ್ ರೋಮನ್ ನಗರವಾದ ಪೊಂಪೇಯಿಗೆ ಭೇಟಿ ನೀಡಿದ್ದಳು. ಈ ವೇಳೆ ಅಲ್ಲಿಂದ 2 ಬಿಳಿ ಮೊಸಾಯಿಕ್ ತುಂಡುಗಳು, 2 ಹೂದಾನಿ ಹಾಗೂ ಪಿಂಗಾಣಿ ವಸ್ತುಗಳನ್ನ ಕದ್ದಿದ್ದಳು. ಆದರೆ ಇದೀಗ ಆ ಎಲ್ಲ ವಸ್ತುಗಳನ್ನ ಹಿಂದಿರುಗಿಸಿರೋ ಮಹಿಳೆ, ಜೊತೆಗೆ ಕ್ಷಮಾಪಣಾ ಪತ್ರವನ್ನೂ ನೀಡಿದ್ದಾಳೆ.
ನಾನು 21 ವರ್ಷ ವಯಸ್ಸಿನವಳಾಗಿದ್ದಾಗ ಈ ನಗರಕ್ಕೆ ಭೇಟಿ ನೀಡಿದ್ದೆ. ಆ ಸಮಯದಲ್ಲಿ ನಾನು ಈ ಎಲ್ಲಾ ವಸ್ತುಗಳನ್ನ ಕಳುವು ಮಾಡಿಕೊಂಡು ತೆರಳಿದ್ದೆ. ಆದರೆ ಇದನ್ನ ತೆಗೆದುಕೊಂಡು ಬಳಿಕ ನಾನು ಸ್ತನ ಕ್ಯಾನ್ಸರ್ಗೆ ಗುರಿಯಾದೆ. ಈ ಹದಿನೈದು ವರ್ಷಗಳಲ್ಲಿ ನನ್ನ ಕುಟುಂಬ ಆರ್ಥಿಕ ಸಂಕಷ್ಟಕ್ಕೂ ಒಳಗಾಗಿದೆ. ಐತಿಹಾಸಿಕ ವಸ್ತುಗಳನ್ನ ಖರೀದಿ ಮಾಡೋಕೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ನಾನು ಕಳುವು ಮಾಡಿದ್ದೆ. ಆದರೆ ಈ ಎಲ್ಲ ವಸ್ತುಗಳಲ್ಲಿ ಋಣಾತ್ಮಕ ಶಕ್ತಿಯಿದೆ. ಈ ವಿನಾಶದ ಭೂಮಿಯಲ್ಲಿ ಅದೆಷ್ಟೋ ಮಂದಿ ಪ್ರಾಣ ತೆತ್ತಿದ್ದಾರೆ. ಹೀಗಾಗಿ ಈ ಎಲ್ಲ ವಸ್ತುಗಳನ್ನ ಹಿಂದಿರುಗಿಸೋ ಮೂಲಕ ನನ್ನ ಕುಟುಂಬಕ್ಕೆ ಎದುರಾಗಿರೋ ದುರಾದೃಷ್ಟವನ್ನ ದೂರ ಮಾಡಿಕೊಳ್ಳಲು ಬಯಸುವೆ ಎಂದು ಬರೆದುಕೊಂಡಿದ್ದಾಳೆ.